ರೋಮ್: ಯುರೋಪಿಯನ್ ಚಾಂಪಿಯನ್ಶಿಪ್ ಗೆದ್ದುಕೊಂಡಿದ್ದ ಇಟಲಿ ಫಟ್ಬಾಲ್ ತಂಡವು ಮುಂಬರುವ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಇಟಲಿಯು ಇದೇ ಮೊದಲ ಬಾರಿ ಸತತ ಎರಡನೇ ವಿಶ್ವಕಪ್ನಿಂದ ಹೊರಗುಳಿಯಲಿದೆ. 2018 ರಲ್ಲಿ ಪಂದ್ಯಾವಳಿಗೆ ಪ್ರವೇಶಿಸಲು ವಿಫಲವಾಗಿತ್ತು.
ಗುರುವಾರ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನಾರ್ತ್ ಮ್ಯಾಸಿಡೋನಿಯಾ ತಂಡದ ವಿರುದ್ಧ ಇಟಲಿ 1-0 ಅಂತರದಿಂದ ಸೋಲನುಭವಿಸಿತು.
ಕಳೆದ ವರ್ಷದ ಜುಲೈನಲ್ಲಿ ರಾಬರ್ಟೊ ಮ್ಯಾನ್ಸಿನಿ ತರಬೇತಿಯಲ್ಲಿ ಪಳಗಿದ್ದ ಇಟಲಿ ತಂಡವು ವೆಂಬ್ಲಿ ಸ್ಟೇಡಿಯಂನಲ್ಲಿ ಯುರೋ-2020 ಕಪ್ ಅನ್ನು ಗೆದ್ದುಕೊಂಡು ಸಂಭ್ರಮಿಸಿತ್ತು.