News Karnataka Kannada
Thursday, May 09 2024
ಕ್ರೀಡೆ

ಶೇನ್ ವಾರ್ನ್ ಕೋಣೆ, ಸ್ನಾನದ ಟವೆಲ್ ನಲ್ಲಿ ರಕ್ತದ ಕಲೆ ಪತ್ತೆ; ಥಾಯ್ಲೆಂಡ್ ಪೊಲೀಸರು

Shane Warne
Photo Credit :

ಬ್ಯಾಂಕಾಕ್ : ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದಿಢೀರ್ ನಿಧನದ ತನಿಖೆಯನ್ನು ಥಾಯ್ಲೆಂಡ್ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಶೇನ್‌ ವಾರ್ನ್‌ ತಂಗಿದ್ದ ಕೋಣೆಯಲ್ಲಿ ಮತ್ತು ಬಾತ್‌ ಟವೆಲ್‌ ಗಳ ಮೇಲೆ “ರಕ್ತದ ಕಲೆಗಳನ್ನು” ತನಿಖಾಧಿಕಾರಿಗಳು ಕಂಡುಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ. 52 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಶುಕ್ರವಾರ ಸಾವನ್ನಪ್ಪಿದರು. ಅವರಿಗೆ ಹೃದಯಾಘಾತವಾಗಿತ್ತು ಎಂದು ಶಂಕಿಸಲಾಗಿದೆ.

ತನಿಖಾಧಿಕಾರಿಗಳು ವಾರ್ನ್ ತಂಗಿದ್ದ ಕೋಣೆಯಲ್ಲಿ ನೆಲ ಮತ್ತು ಸ್ನಾನದ ಟವೆಲ್‌ ಗಳ ಮೇಲೆ ರಕ್ತದ ಕಲೆಯನ್ನು ಪತ್ತೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಅಧಿಕಾರಿಗಳು ಥಾಯ್ಲೆಂಡ್‌ಗೆ ಆಗಮಿಸಿದ್ದು, ಅವರ ಮೃತದೇಹವನ್ನು ಸ್ವದೇಶಕ್ಕೆ ತರಲು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

ವಾರ್ನ್ ಅವರಿಗೆ ಆಸ್ಟ್ರೇಲಿಯಾವನ್ನು ತೊರೆಯುವ ಮೊದಲು ಎದೆನೋವು ಕಾಣಿಸಿಕೊಂಡಿತ್ತು.ಹೃದ್ರೋಗ ಮತ್ತು ಆಸ್ತಮಾದ ಇತಿಹಾಸವನ್ನು ವಾರ್ನ್ ಹೊಂದಿದ್ದರು ಎಂದು ತಿಳಿಯಲಾಗಿದೆ. ವಿಲ್ಲಾವನ್ನು ಶೋಧಿಸುವಾಗ ವಾರ್ನ್‌ ನ ಕೋಣೆಯ ನೆಲದ ಮೇಲೆ ಮತ್ತು ಸ್ನಾನದ ಟವೆಲ್‌ಗಳ ಮೇಲೆ ತನಿಖಾಧಿಕಾರಿಗಳು ರಕ್ತದ ಕಲೆಗಳನ್ನು ಕಂಡುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು