ಹೊಸದಿಲ್ಲಿ: ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಟನ್ ಆಟಗಾರ್ತಿ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇಂಡಿಯಾ ಓಪನ್ ನಲ್ಲಿ ಚಾಂಪಿಯನ್ ಆಗುವ ಮೂಲಕ ಸಿಂಧು ಇತ್ತೀಚೆಗೆ ವಿಶ್ವ ನಂ.2 ಶ್ರೇಯಾಂಕಕ್ಕೇರಿದ್ದು, ಇದು ಸಿಂಧು ಅವರ ಜೀವನ ಶ್ರೇಷ್ಠ ಶ್ರೇಯಾಂಕ ಸಾಧನೆಯಾಗಿದೆ.
ಸಿಂಗಾಪುರ ಓಪನ್ ಸೂಪರ್ ಸೀರಿಸ್ ಮತ್ತು ಮಲೇಷ್ಯಾ ಓಪನ್ ಸೋಲಿನಿಂದಾಗಿ ಕಳೆದ ವಾರ ಸಿಂಧು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದರು.