ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಇಬ್ಬರು ಭಾರತೀಯರಾದ ಕಿಡಂಬಿ ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ನಡುವಿನ ಪಂದ್ಯದಲ್ಲಿ ಶ್ರೀಕಾಂತ್ ಕಿಡಂಬಿ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ಶ್ರೀಕಾಂತ್ ಹಾಗೂ ಲಕ್ಷ್ಯ ನಡುವೆ ನಡೆದ ಸೆಮಿ ಫೈನಲ್ಸ್ ನಲ್ಲಿ ಮೊದಲ ಗೇಮ್ ನಲ್ಲಿ ಲಕ್ಷ್ಯ ಗೆದ್ದುಕೊಂಡರೆ, ಎರಡನೇ ಪಂದ್ಯದಲ್ಲಿ ಶ್ರೀಕಾಂತ್ ಗೆದ್ದುಕೊಂಡರು. ನಂತರ ಕೊನೆಯ ನಿರ್ಣಾಯಕ ಮ್ಯಾಚ್ ನಲ್ಲಿ 21-17 ಅಂತರದಲ್ಲಿ ಶ್ರೀಕಾಂತ್ ಫಿನಾಲೆ ತಲುಪಿದ್ದಾರೆ.
ಕೇವಲ 17 ನಿಮಿಷದ ಆಟದಲ್ಲಿ 17-21, 21-14, 21-17 ರ ಅಂತರ ಗಳಿಸಿ ಶ್ರೀಕಾಂತ್ ರೋಚಕ ಜಯ ಗಳಿಸಿದರು. ಈ ಮೂಲಕ ವಿಶ್ವ ಚಾಂಪಿಯನ್ ಶಿಪ್ ಫಿನಾಲೆ ಪ್ರವೇಶಿಸಿರುವ ಮೊದಲ ಪುರುಷ ಆಟಗಾರರಾಗಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವ ಬ್ಯಾಟ್ಮಿಂಟನ್ ಶಿಪ್ ನಲ್ಲಿ ಪುರುಷರ ತಂಡ ಕನಿಷ್ಠ ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.
1983ರಲ್ಲಿ ಪ್ರಕಾಶ್ ಪಡುಕೋಣೆ ಹಾಗೂ 2019ರಲ್ಲಿ ಸಾಯಿ ಪ್ರಣೀತ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು.