News Karnataka Kannada
Thursday, May 16 2024
ಕ್ರೀಡೆ

ವಿಶ್ವದಾಖಲೆಗಾಗಿ ಅರಮನೆಯಿಂದ ರೇಸ್ ಕೋರ್ಸ್ ಗೆ ಸ್ಥಳಾಂತರಗೊಂಡ ಯೋಗ

Photo Credit :

ವಿಶ್ವದಾಖಲೆಗಾಗಿ ಅರಮನೆಯಿಂದ ರೇಸ್ ಕೋರ್ಸ್ ಗೆ ಸ್ಥಳಾಂತರಗೊಂಡ ಯೋಗ

ಮೈಸೂರು: ಅರಮನೆಯಲ್ಲಿ ಅಂಗಳ ಹಾಗೂ ನಗರದ ವಿವಿಧ ರಸ್ತೆಗಳಲ್ಲಿ ನಡೆಯಬೇಕಿದ 3ನೇ ಅಂತಾರಾಷ್ಟ್ರೀಯ ಯೋಗ ದಿನದ ಸ್ಥಳವನ್ನ ವಿಶ್ವದಾಖಲೆಗೆ ತೊಂದರೆಯಾಗುವ ಹಿನ್ನಲ್ಲೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ಗೆ ಸ್ಥಳಾಂತರಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಜೂನ್ 21 ರಂದು 3ನೇ ಅಂತರರಾಷ್ಟ್ರೀಯ ಯೋಗ ದಿನದಂದು ಸಾಂಸ್ಕೃತಿಕ ನಗರಿ ಹಾಗೂ ಯೋಗ ನಗರಿ ಖ್ಯಾತಿಯ ಮೈಸೂರಿನಲ್ಲಿ 60 ಸಾವಿರ ಜನರು ಯೋಗ ಮಾಡುವ ಮೂಲಕ ಎರಡು ವಿಶ್ವದಾಖಲೆ ನಿರ್ಮಾಣಕ್ಕಾಗಿ ಅರಮನೆ ಅಂಗಳ, ನಗರದ ಅರಮನೆ, ಅಂಜನೇಯ ಸ್ವಾಮಿ ದೇವಸ್ಥನಾದ ಮುಂಭಾಗದಲ್ಲಿರುವ ಜಯ ಚಾಮರಾಜೇಂದ್ರ ವೃತ್ತ, ಕೃಷ್ಣ ರಾಜೇಂದ್ರ ವೃತ್ತ, ದೇವರಾಜ ಅರಸ್ ರಸ್ತೆ, ಮಹಾರಾಣಿ ಕಾಲೇಜು ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ ಹಾಗೂ ಓವಲ್ ಮೈದಾನದಲ್ಲಿ ಬರುವ ರಸ್ತೆಗಳಲ್ಲಿ ಯೋಗ ಪ್ರದರ್ಶನ ನಡೆಸಲು ಹಿಂದೆ ತೀರ್ಮಾನಸಲಾಗಿತ್ತು.

ವಿಶ್ವದಾಖಲೆಗೆ ಅಡ್ಡಿ:
ಅರಮನೆಯ ಆವರಣದಲ್ಲಿ ಕೇಲವ 12 ಸಾವಿರ ಜನ ಯೋಗ ಮಾಡಬಹುದಾಗಿದೆ. ಜೊತೆಗೆ ರಸ್ತೆಗಳಲ್ಲಿ ಯೋಗ ಮಾಡುವುದರಿಂದ ಸಂಚಾರಕ್ಕೆ ಅಡಿಯಾಗವುದು, ಜೊತೆಗೆ ವಿಶ್ವದಾಖಲೆಗೆ ಏಣಿಕೆ ಮಾಡಲು ಕಷ್ಟವಾಗುತ್ತದೆ. ಅಲ್ಲದೆ ವಿಶ್ವ ದಾಖಲೆ ಮಾಡಲು ಒಂದೇ ಸ್ಥಳದಲ್ಲಿ ಯೋಗ ಮಾಡಿದರೆ ಮಾತ್ರ ವಿಶ್ವ ದಾಖಲೆ ಆಗುತ್ತದೆ ಎಂದು ಗಿನ್ನಿಸ್ ದಾಖಲೆಯ ಪ್ರತಿನಿಧಿಗಳ ಹೇಳಿರುವ ಹಿನ್ನಲ್ಲೆಯಲ್ಲಿ ಜಿಲ್ಲಾಡಳಿತ ದೀಡಿರನೇ ಯೋಗ ಮಾಡುವ ಸ್ಥಳವನ್ನ ಮೈಸೂರಿನ ರೇಸ್ ಕೋರ್ಸ್ ಗೆ ಸ್ಥಳಾಂತರಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಈಗಾಗಲೇ 25 ಸಾವಿರಕ್ಕೂ ಹೆಚ್ಚು ಜನ ಯೋಗ ಮಾಡಲು ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಂಡಿದ್ದು, ಅರಮನೆ ಆವರಣ ಹಾಗೂ ಇತರ ರಸ್ತೆಗಳಲ್ಲಿ ಯೋಗ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಗಿನ್ನಿಸ್ ದಾಖಲೆ ಮಾಡಲು ಏಣಿಕೆಗೆ ತೊಂದರೆಯಾಗುತ್ತದೆ. ಈ ಹಿನ್ನಲ್ಲೆಯಲ್ಲಿ ವಿಶಾಲವಾಗಿ 70 ಎಕರೆ ವಿಸ್ತಿರಣದಲ್ಲಿರುವ ಮೈಸೂರು ರೇಸ್ ಕೋರ್ಸ್ ಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿ ವಾಹನ ನಿಲುಗಡೆಗೆ ಸ್ಥಳವಕಾಶವಿದ್ದು, ಸುಮಾರು 60 ಸಾವಿರ ಜನ ಒಂದೇ ಸ್ಥಳದಲ್ಲಿ ಯೋಗ ಮಾಡಲು ವಿಶಾಲವಾಗಿದೆ. ಜೊತೆಗೆ ಚಾಮುಂಡಿ ಬೆಟ್ಟದ ಮೇಲಿಂದ ವಿಡಿಯೋ ಹಾಗೂ ಫೋಟೋಗಳನ್ನ ತೆಗೆಯಲು ಒಳ್ಳೆಯ ಸ್ಥಳ ಇದರಿಂದ ರೇಸ್ ಕೋರ್ಸ್ ಜಾಗವನ್ನ ಯೋಗ ದಿನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಡಿ.ರಂದೀಪ್ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು