News Karnataka Kannada
Tuesday, April 30 2024
ಕ್ರೀಡೆ

ವಿಶ್ವಕಪ್‌ ನಲ್ಲಿ ಪಾಕ್‌ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ ಜಯ!

Cricket Women
Photo Credit : News Kannada

ಐಸಿಸಿ ಮಹಿಳಾ ವಿಶ್ವಕಪ್‌ ನಲ್ಲಿ ಭಾರತದ ಮಹಿಳೆಯರು ಬದ್ಧ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾವನ್ನು 107 ರನ್‌ ಗಳಿಂದ ಮಣಿಸಿ ಗೆದ್ದು ಬೀಗಿದ್ದಾರೆ.

ಮೌಂಟ್‌ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 52 ರನ್, ದೀಪ್ತಿ 40 ರನ್​ ಗಳಿಸಿ ತಂಡಕ್ಕೆ ಆಸರೆಯಾದರು.

೨೧ ಓವರ್‌ ಗಳಲ್ಲಿ ಎರೆಡು ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿದ್ದ ಭಾರತ ಬಳಿಕ ದಿಢೀರ್‌ ಕುಸಿತಕ್ಕೆ ಒಳಗಾಯಿತು. ಅನುಭವಿಗಳಾದ ನಾಯಕಿ ಮಿಥಾಲಿ ರಾಜ್ 9, ಹರ್ಮನ್​ಪ್ರೀತ್ ಕೌರ್ 5 ಹಾಗೂ ಯುವ ಆಟಗಾರ್ತಿ ರಿಚಾ ಘೋಷ್ ಕೇವಲ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ತಂಡವನ್ನು ಆಧರಿಸಿದ ಸ್ನೇಹ್ ರಾಣ(53) ಹಾಗೂ ಪೂಜಾ ವಸ್ತ್ರಕರ್(67) ರನ್‌ ಸಿಡಿಸಿ ತಂಡವನ್ನು ಆಧರಿಸಿದರು.

ಅಂತಿಮವಾಗಿ 50 ಓವರ್​ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 254 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಾಕ್‌ ವನಿತೆಯರು ಭಾರತದ ಬಿಗು ಬೌಲಿಂಗ್‌ ದಾಳಿಗೆ ತತ್ತರಿಸಿ 43 ಓವರ್‌ ಗಳಲ್ಲಿ ಕೇವಲ 137 ರನ್‌ ಗಳಿಗೆ ಆಲೌಟ್‌ ಆಗಿದ್ದಾರೆ. ಮಾರಕ ದಾಳಿ ನಡೆಸಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ 4 ವಿಕೆಟ್‌, ಜೂಲನ್‌ ಗೋಸ್ವಾಮಿ ಹಾಗೂ ಸ್ನೇಹ್‌ ರಾಣ 2 ವಿಕೆಟ್‌ ಕಬಳಿಸಿ ಪಾಕ್‌ ಬ್ಯಾಂಟಿಂಗ್‌ ಬೆನ್ನೆಲುಬು ಮುರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು