News Karnataka Kannada
Monday, May 13 2024
ಕ್ರೀಡೆ

ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ವಿಂಡೀಸ್ ಗೆ ಭರ್ಜರಿ ಜಯ

Photo Credit :

ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ವಿಂಡೀಸ್ ಗೆ ಭರ್ಜರಿ ಜಯ

ನಾಟಿಂಗ್ ಹ್ಯಾಮ್: ಪಾಕಿಸ್ತಾನವನ್ನು ಕನಿಷ್ಠ ಮೊತ್ತಕ್ಕೆ ಆಲೌಟ್ ಮಾಡಿದ ವೆಸ್ಟ್ ಇಂಡೀಸ್ ಏಳು ವಿಕೆಟ್ ಗೆಲುವಿನೊಂದಿಗೆ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದೆ.

ಕ್ರಿಸ್ ಗೇಲ್ 34 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ವಿಂಡೀಸ್ ಗೆ ಸುಲಭ ಗೆಲುವು ತಂದುಕೊಟ್ಟರು. ಮೊಹಮ್ಮದ್ ಅಮೀರ್ ಆರು ಓವರ್ ಗಳಲ್ಲಿ 26 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ವಿಂಡೀಸ್ 105 ರನ್ ಗಳಿಗೆ ಪಾಕಿಸ್ತಾನವನ್ನು ಆಲೌಟ್ ಮಾಡಿತು. ಒಶಾನೆ ಥಾಮಸ್ ನಾಲ್ಕು ವಿಕೆಟ್ ಉರುಳಿಸಿ ಪಾಕ್ ನ ಬ್ಯಾಟ್ಸ್ ಮೆನ್ ಗಳನ್ನು ಕಾಡಿದರು. ಕಪ್ತಾನ ಜಾಸನ್ ಹೋಲ್ಡರ್ ಮತ್ತು ಆಂಡ್ರೆ ರಸೆಲ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಉರುಳಿಸಿದರು.

ಥಾಮಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು