ಲಡಾಖ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈಗ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ತನ್ನ 106 ಟಿಎ ಬ್ಯಾಟಲಿಯನ್ ಜತೆಗೆ 73ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡರು.
ಜಮ್ಮುಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಹೊಸ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ನಲ್ಲಿ ಧೋನಿ ಅವರು ಸ್ವಾತಂತ್ರ್ಯೋತ್ಸವ ಆಚರಿಸಿದರು.
38ರ ಹರೆಯದ ಧೋನಿ ಬುಧವಾರ ಲಡಾಖ್ ಗೆ ಆಗಮಿಸಿದ ವೇಳೆ ಸೇನೆಯು ಅವರಿಗೆ ಅದ್ಧೂರಿ ಸ್ವಾಗತ ನೀಡಿತು ಮತ್ತು ಸೈನಿಕರೊಂದಿಗೆ ಅವರು ಮಾತುಕತೆ ನಡೆಸಿದರು.
ಇದರ ಬಳಿಕ ಧೋನಿ ಅವರು ಸೇನಾ ಮುಖ್ಯ ಆಸ್ಪತ್ರೆಗೆ ತೆರಳಿ ಅಲ್ಲಿ ರೋಗಿಗಳ ಜತೆಗೆ ಮಾತನಾಡಿದರು.