News Karnataka Kannada
Friday, May 17 2024
ಕ್ರೀಡೆ

ರಾಷ್ಟ್ರಮಟ್ಟದ ಕ್ರೀಡಾ ಕೂಟ: ಎರಡನೇ ದಿನವೂ ಮುಂಚೂಣಿಯಲ್ಲಿ ಮಂಗಳೂರು ವಿವಿ

Photo Credit :

ರಾಷ್ಟ್ರಮಟ್ಟದ ಕ್ರೀಡಾ ಕೂಟ: ಎರಡನೇ ದಿನವೂ ಮುಂಚೂಣಿಯಲ್ಲಿ ಮಂಗಳೂರು ವಿವಿ

ಮೂಡುಬಿದಿರೆ: ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ನ ಎರಡನೇ ದಿನವಾದ ಶುಕ್ರವಾರ ಎರಡು ಕೂಟ ದಾಖಲೆಯೊಂದಿಗೆ  ಎರಡನೇ ದಿನವೂ ಮಂಗಳೂರು ವಿವಿ ಕೂಟದಲ್ಲಿ ಮುಂಚೂಣಿಯಲ್ಲಿದೆ.

 20ಕಿ.ಮೀ. ನಡಿಗೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಜುನೇದ್ ಕೂಟ ದಾಖಲೆ ನಿರ್ಮಿಸಿದ್ದಾರೆ. 20 ಕಿ.ಮೀ. ದೂರವನ್ನು 1ಗಂಟೆ 26ನಿಮಿಷ 39.78ಸೆಕೆಂಡ್‍ನಲ್ಲಿ ಕ್ರಮಿಸಿದ ಜುನೇದ್ ರಾಯ್‍ಪುರ್‍ನ ಆರ್‍ಎಸ್‍ಎಸ್ ವಿವಿಯ ಬಿ. ಕುಮಾರ್ ಪಿಟಿ -(1ಗ 29ನಿ 08.00ಸೆ) ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಸರಿಗಟ್ಟಿದರು. ಉದ್ದಜಿಗಿತದಲ್ಲಿ ಮದ್ರಾಸ್ ವಿವಿಯ ಎ. ಷೆರಿನ್ 6.32 ಮೀ. ಜಿಗಿತದೊಂದಿಗೆ ಕೂಟ ದಾಖಲೆ ನಿರ್ಮಿಸಿದ್ದಾರೆ. ಕಣ್ಣೂರು ವಿವಿಯ ಮಯೂಖ ಜೋನಿ (6.28ಮೀ) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಇದರೊಟ್ಟಿಗೆ ಕೂಟದಲ್ಲಿ ಈವರೆಗೆ 3 ಕೂಟ ದಾಖಲೆಗಳು ನಿರ್ಮಾಣಗೊಂಡಿವೆ. 

ಮುಂಚೂಣಿಯಲ್ಲಿ ಮಂಗಳೂರು ವಿವಿ:  ಎರಡನೇ ದಿನದ ಅಂತ್ಯಕ್ಕೆ ಮಂಗಳೂರು ವಿವಿ 4 ಚಿನ್ನದ ಪದಕ, 4 ರಜತ ಹಾಗೂ 2 ಕಂಚಿನ ಪದಕದೊಂದಿಗೆ ಕೂಟದಲ್ಲಿ ಮುಂಚೂಣಿಯಲ್ಲಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಜುನೇದ್ ಕೆ.ಟಿ. 20ಕಿ.ಮೀ ನಡಿಗೆಯಲ್ಲಿ, 800 ಮೀ. ಓಟದಲ್ಲಿ ಸುನಿಲಾ ಕುಮಾರಿ, ಹ್ಯಾಮರ್ ತ್ರೋನಲ್ಲಿ ಪ್ರದೀಪ್ ಕುಮಾರ್ ಚಿನ್ನದ ಪದಕ ಪಡೆದರು. 20ಕಿ.ಮೀ ನಡಿಗೆಯಲ್ಲಿ ನವೀನ್, 100 ಮೀ. ಓಟದಲ್ಲಿ ಎಸ್. ಧನಲಕ್ಷ್ಮಿ, ಉದ್ದ ಜಿಗಿತದಲ್ಲಿ ಐಶ್ವರ್ಯ, ಹೈಜಂಪ್‍ನಲ್ಲಿ ಆರೋಮಲ್ ರಜತ ಪದಕ ಪಡೆದರೆ, 800 ಮೀ.ದಲ್ಲಿ ಮುಜಾಮಿಲ್ ಎ., ಚಕ್ರ ಎಸೆತದಲ್ಲಿ ನಿಧಿರಾಣಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು