ದುಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ನಿಧಾನಗತಿಯ ಓವರ್ ಸರಾಸರಿಗಾಗಿ ರಾಜಸ್ಥಾನ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಗೆ 12 ಲಕ್ಷ ರೂಪಾಯಿ ದಂಡ ಹೇರಲಾಗಿದೆ.
ಮಂಗಳವಾರ ನಡೆದ ಐಪಿಎಲ್ ನ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ನಿಗದಿತ 20 ಓವರ್ ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ವಿಫಲವಾಗಿತ್ತು.
ಇದರಿಂದಾಗಿ ರಾಯಲ್ಸ್ ನಾಯಕ ಸ್ಮಿತ್ ಗೆ 12 ಲಕ್ಷ ರೂಪಾಯಿ ದಂಡ ಹೇರಲಾಗಿದೆ ಎಂದು ಐಪಿಎಲ್ ನ ಆಡಳಿತ ಸಮಿತಿ ತಿಳಿಸಿದೆ.