News Karnataka Kannada
Monday, April 29 2024
ಕ್ರೀಡೆ

ಮೊಹಾಲಿ ಅಂಗಳದಲ್ಲಿ ಜಡೇಜ ಭರ್ಜರಿ ಶತಕ

Jadeja
Photo Credit : Twitter

ಮೊಹಾಲಿ:  ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದ್ದಾರೆ.

ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿದ ರವೀಂದ್ರ ಜಡೇಜಾ ತಮ್ಮ ಖಡ್ಗ ಶೈಲಿಯಲ್ಲಿ ಸಂಭ್ರಮಿಸಿದರು.ಮೊದಲ ದಿನದಾಟದ ಅಂತ್ಯಕ್ಕೆ 45 ರನ್ ಗಳಿಸಿ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ ಇಂದು ವೇಗವಾಗಿಯೇ ಬ್ಯಾಟ್ ಬೀಸಿದರು. 160 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ 10 ಬೌಂಡರಿ ಬಾರಿಸಿದರು.

ಆರು ವಿಕೆಟ್ ಗೆ 357 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಜಡೇಜಾ ಮತ್ತು ಅಶ್ವಿನ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಏಳನೇ ವಿಕೆಟ್ ಗೆ ಈ ಇಬ್ಬರು ಆಲ್ ರೌಂಡರ್ ಗಳು 130 ರನ್ ಜೊತೆಯಾಟವಾಡಿದರು. ಆಕರ್ಷಕ ಬೌಂಡರಿಗಳಿಂದ ಗಮನ ಸೆಳೆದ ರವಿಚಂದ್ರನ್ ಅಶ್ವಿನ್ 61 ರನ್ ಗಳಿಸಿ ಲಕ್ಮಲ್ ಎಸೆತದಲ್ಲಿ ಔಟಾದರು.

ರವೀಂದ್ರ ಜಡೇಜಾ ಶತಕದ ವೇಳೆ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 463 ರನ್ ಗಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು