ನಾರ್ತ್ ಸೌಂಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ೭೫ ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ೨೯೭ ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ೨೨೨ ರನ್ಗೆ ಆಲ್ ಔಟ್ ಆಗಿದೆ. ಬಿರುಗಾಳಿ ವೇಗದ ಬೌಲಿಂಗ್ ನಡೆಸಿದ ಇಶಾಂತ್ ಶರ್ಮಾ (೪೩ಕ್ಕೆ ೫) ಅತಿಥೇಯರನ್ನು ಕಡಿಮೆ ರನ್ಗೆ ಕಟ್ಟಿಹಾಕಿದರು.