ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೆಲ ಆಟಗಾರರ ಲಕ್ ಖುಲಾಯಿಸಿದೆ. ಇಂದಿನ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ಗೆ ಇಶಾನ್ ಮತ್ತೊಮ್ಮೆ ಮರಳಿದ್ದಾರೆ. ಮುಂಬೈ 15.25 ಕೋಟಿಗೆ ಇಶಾನ್ ಅವರನ್ನು ಖರೀದಿಸಿದೆ.
ಇಶಾನ್ ಖರೀದಿಗೆ ಅನೇಕ ತಂಡಗಳು ಆಸಕ್ತಿ ತೋರಿದ್ದವು. ಮುಂಬೈ ಮೊದಲು ಪಂಜಾಬ್, ಗುಜರಾತ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಬಿಡ್ ಮಾಡಿತ್ತು. ಆದ್ರೆ ಅಂತಿಮವಾಗಿ ಇಶಾನ್, ಮುಂಬೈ ಪಾಲಾದರು.
ಇಶಾನ್ ಕಿಶನ್, ವಿಕೆಟ್ ಕೀಪರ್, ಬ್ಯಾಟ್ಸ್ ಮೆನ್. ಐಪಿಎಲ್ ನಲ್ಲಿ ಇಶಾನ್ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿಗೆ ಖರೀದಿ ಮಾಡಿತ್ತು.
ಇನ್ನು ಅಂಬಟಿ ರಾಯುಡು ಸಿಎಸ್ಕೆಗೆ ಮರಳಿದ್ದಾರೆ. ರಾಯುಡುಗೆ ಸನ್ರೈಸರ್ಸ್ ಹೈದರಾಬಾದ್ನಿಂದ ತೀವ್ರ ಪೈಪೋಟಿ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ರಾಯುಡು 6.75 ಕೋಟಿಗೆ ಸಿಎಸ್ಕೆ ಪಾಲಾಗಿದ್ದಾರೆ.
ಅತಿ ಹೆಚ್ಚು ಮೊತ್ತಕ್ಕೆ ಇಂದು ಮಾರಾಟವಾದ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಹರ್ಷಲ್ ಪಟೇಲ್ ಸೇರಿದ್ದಾರೆ. ಅವರನ್ನು ಕ್ರಮವಾಗಿ ಕೆಕೆಆರ್ ಹಾಗೂ ಆರ್ ಸಿ ಬಿ 12.25 ಕೋಟಿ ಹಾಗೂ 10.75 ಕೋಟಿಗೆ ಖರೀದಿ ಮಾಡಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…
ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…
ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…
ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…