ರಿಯೋ ಡಿ ಜನೈರ್: ರಿಯೋ ಒಲಿಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಪಿವಿ ಸಿಂಧು ಅದ್ಭುತವಾಗಿ ಆಟವಾಡಿದ್ದು, ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ 2 ಶ್ರೇಯಾಂಕಿತೆ ಚೀನಾದ ಯಿಹಾನ್ ವಾಂಗ್ ರನ್ನು ಸೋಲಿಸಿದ್ದು ನನ್ನ ವೃತ್ತಿ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದು ಎವರು ಅಭಿಪ್ರಾಯಪಟ್ಟಿದ್ದಾರೆ. ಸಿಂಧು ಸೆಮಿಫೈನಲ್ ತಲುಪಿದ್ದು ಸಿಂಧೂ ಸೆಮಿಸ್ ನಲ್ಲಿ ಜಪಾನಿನ ನೊಜೊಮಿ ಓಕುಹರ ವಿರುದ್ಧ ಸೆಣಸಲಿದ್ದು, ನೊಜೊಮಿ ವಿರುದ್ಧ ಉತ್ತಮವಾಗಿ ಆಡುವ ಭರವಸೆ ನೀಡಿದ್ದಾರೆ. ರಿಯೋ ಒಲಿಂಪಿಕ್ಸ್ ನನಗೆ ವಿಭಿನ್ನ ಅನುಭವ ನೀಡುತ್ತಿದೆ. ಇದು ನನ್ನ ಜೀವನದ ಅದ್ಭುತ ಕ್ಷಣ ಎನ್ನಬಹುದು ಎಂದು ವಿಶ್ವದ 10ನೇ ರ್ಯಾಂಕ್ ನ ಸಿಂಧೂ ಹೇಳಿದ್ದಾರೆ.