News Karnataka Kannada
Sunday, May 19 2024
ಕ್ರೀಡೆ

ಮಹಿಳಾ ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿದ ಭಾರತ

Photo Credit :

ಮಹಿಳಾ ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿದ ಭಾರತ

ಗಯಾನ: ಭಾರತದ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ಆರಂಭವಾದ ಟಿ-20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 34 ರನ್ ಗಳ ಗೆಲುವು ದಾಖಲಿಸಿಕೊಂಡಿದೆ.

ನಾಯಕಿ ಹರ್ಮನ್ ಪ್ರೀತ್ ಕೌರ್ ಟಿ-20ಯಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿ ತಂಡವು ಐದು ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಲು ನೆರವಾದರು. ಕೌರ್ 51 ಎಸೆತಗಳಲ್ಲಿ 103 ರನ್ ಬಾರಿಸಿದರು. ಇದರಲ್ಲಿ ಎಂಟು ಸಿಕ್ಸರ್ ಗಳು ಮತ್ತು ಏಳು ಬೌಂಡರಿಗಳು ಒಳಗೊಂಡಿದ್ದವು. ಇದು ಟಿ-20 ಪಂದ್ಯದಲ್ಲಿ ಭಾರತೀಯ ಮಹಿಳೆಯ ಮೊದಲ ಶತಕವಾಗಿದೆ.

ಜೆಮಿಮಾಹ ರೋಡ್ರಿಗಸ್ 45 ಎಸೆತಗಳಲ್ಲಿ 59 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರಾದರೂ ವಿಫಲರಾದರು. ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ್ತಿ ಸುಝಿ ಬ್ಯಾಟೆ 50 ಎಸೆತಗಳಲ್ಲಿ 67 ರನ್ ಸಿಡಿಸಿದರು.

ಸ್ಪಿನ್ನರ್ ಗಳಾದ ಪೂನಂ ಯಾದವ್(3/26) ಮತ್ತು ರಾಧಾ ಯಾದವ್(2/31) ಐದು ವಿಕೆಟ್ ಪಡೆದರು. ದಯಾಲನ್ ಹೇಮಲತಾ 26 ರನ್ ಗಳಿಗೆ ಮೂರು ವಿಕೆಟ್ ಉರುಳಿಸಿ ಆಘಾತವಿಕ್ಕಿದರು.

ಬಿ ವಿಭಾಗದಲ್ಲಿರುವ ಭಾರತ ತಂಡವು ನ.11ರಂದು ಪಾಕಿಸ್ತಾನ ಮತ್ತು ನ.15ರಂದು ಐರ್ಲೆಂಡ್ ಮತ್ತು ನ.17ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧ 52 ರನ್ ಗಳ ಗೆಲುವು ದಾಖಲಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು