News Karnataka Kannada
Thursday, May 02 2024
ಕ್ರೀಡೆ

ಪ್ಯಾರಾಲಂಪಿಕ್ಸ್: ಎತ್ತರ ಜಿಗಿತದಲ್ಲಿ ಭಾರತದ ನಿಶಾದ್‌ಗೆ ಬೆಳ್ಳಿ ಪದಕ

Nishad Kumar 29082021
Photo Credit :

ಟೋಕಿಯೊ: ಭಾರತದ ನಿಶಾದ್ ಕುಮಾರ್ ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಪುರುಷರ ವಿಭಾಗದ ಎತ್ತರದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

2.06 ಮೀಟರ್ ಗಳಷ್ಟು ಜಿಗಿಯುವ ಮೂಲಕ ನಿಶಾದ್ ಕುಮಾರ್ ತಮ್ಮದೇ ಏಷ್ಯನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಭಾರತದ ಮತ್ತೊಬ್ಬ ಕ್ರೀಡಾಪಟು ರಾಮ್ ಪಾಲ್ 5 ನೇ ಸ್ಥಾನ ಪಡೆದಿದ್ದು, 1.94 ಮೀಟರ್ ಜಿಗಿದಿದ್ದಾರೆ. ಅಮೆರಿಕಾದ ಡಲ್ಲಾಸ್ ವೈಸ್ 2.06 ಮೀಟರ್ (ನಿಶಾದ್ ಕುಮಾರ್ ಅವರ ಸಮ) ಜಿಗಿದಿದ್ದು ರಜತ ಪದಕವನ್ನು ಭಾರತೀಯ ಕ್ರೀಡಾಪಟುವಿನೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅಮೆರಿಕದ ಕ್ರೀಡಾಪಟು ರೋಡೆರಿಕ್ ಟೌನ್ಸೆಂಡ್ 2.15 ಮೀಟರ್ ಜಿಗಿದಿದ್ದು ದಾಖಲೆ ನಿರ್ಮಿಸಿದ್ದಾರೆ. ಫೈನಲ್ ನಲ್ಲಿ ನಿಶಾದ್ ಕುಮಾರ್ 1.89 ರಿಂದ ಜಿಗಿತ ಪ್ರಾರಂಭಿಸಿ ಹಾದಿ ಸುಗಮಗೊಳಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು