ಹೊಸದಿಲ್ಲಿ: ಪತ್ರಕರ್ತರ ಪ್ರಶ್ನೆಗಳಿಗೆ ನಸು ನಗುವಿಕೆಯಲ್ಲಿ ಉತ್ತರ ನೀಡಿ ನಗೆಗಡಲಲ್ಲಿ ತೇಲಿಸಿದ್ದಾರೆ ಭಾರತ ತಂಡದ ಕ್ರಿಕೆಟ್ ಆಟಗಾರ ರೈನಾ.
ಟೀಂ ಇಂಡಿಯಾಗೆ ವಿದೇಶಿಗ ಕೋಚ್ ಬೇಕೋ, ಭಾರತೀಯ ಕೋಚ್ ಬೇಕೋ? ಎಂದು ಪತ್ರಕರ್ತರೊಬ್ಬರು ರೈನಾಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ರೈನಾ, ನೀವು ನಿಮ್ಮ ಹೆಂಡತಿಯೊಂದಿಗೆ ನೆಮ್ಮದಿಯಿಂದ ಇರುತ್ತೀರೋ ಅಥವಾ ಇನ್ನೊಬ್ಬನ ಹೆಂಡತಿಯೊಂದಿಗೆ? ಎಂದು ಉತ್ತರಿಸಿದ ಕೂಡಲೇ ಅಲ್ಲಿ ನಗೆಯ ಅಲೆ ತೇಲಿ ಬಂತು. ಧೋನಿಯವ ಪ್ರಭಾವವೋ ಏನೋ ಇದೀಗ ಸುರೇಶ್ ರಯನಾ ಕೂಡಾ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ರೀತಿ ಹಾಸ್ಯದ ಉತ್ತರವನ್ನು ನೀಡುವುದನ್ನು ಕಲಿತು ಬಿಟ್ಟಿದ್ದಾರೆ.
ಕೋಚ್ ಸ್ಥಾನಕ್ಕೆ ಹಲವಾರು ಕ್ರಿಕೆಟಿಗರ ಹೆಸರು ಕೇಳಿ ಬರುತ್ತಿದ್ದರೂ, ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಶನಿವಾರ ಆರಂಭವಾಗಲಿರುವ ಐಪಿಎಲ್ ಟೂರ್ನಮೆಂಟ್ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ರೈನಾ ಮುನ್ನಡೆಸಲಿದ್ದಾರೆ.