ನವದೆಹಲಿ: ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತನ್ನ ಮತ್ತು ಪತ್ನಿ ಹಸೀನ್ ಜಹಾನ್ ರ ಸಂಬಂಧ ಮುಗಿದ ಅಧ್ಯಾಯವೆಂದು ಸ್ಪಷ್ಟಪಡಿಸಿದ್ದಾರೆ.
ಜಹಾನ್ ಅವರು ಪತಿ ಶಮಿ ಮೇಲೆ ಕಿರುಕುಳ, ಕೊಲೆಯತ್ನ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದಾರೆ. ಈ ಎಲ್ಲಾ ಆರೋಪಗಳ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸತ್ಯ ಹೊರಬರಬೇಕು ಎಂದು ಶಮಿ ಆಗ್ರಹಿಸಿದ್ದಾರೆ.
ನಾವೆಲ್ಲರೂ ಮಾತುಕತೆ ಮೂಲಕ ಬಗೆಹರಿಸುವ ಬಗ್ಗೆ ತಿಳಿಸಿದ್ದೆವು. ಆದರೆ ಜಹಾನ್ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾಳೆ. ಆಕೆಗೆ 18 ಲಕ್ಷ ಮೌಲ್ಯದ ಒಡವೆ ತೆಗೆದುಕೊಟ್ಟ ರಸೀದಿ ಕೂಡ ಇದೆ. ನನ್ನ ಅಣ್ಣನ ವಿರುದ್ಧ ಜಹಾನ್ ಅತ್ಯಾಚಾರ ಆರೋಪ ಮಾಡಿದ್ದಾಳೆ. ಇದು ಸಂಪೂರ್ಣ ಸುಳ್ಳು ಎಂದು ಶಮಿ ತಿಳಿಸಿದ್ದಾರೆ.