News Karnataka Kannada
Wednesday, May 01 2024
ಕ್ರೀಡೆ

ನವಜಾತ ಗಂಡುಮಗುವನ್ನು ಕಳೆದುಕೊಂಡ ರೊನಾಲ್ಡೊ

Ronaldo
Photo Credit :

ಮ್ಯಾಂಚೆಸ್ಟರ್ : ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಗಂಡುಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಫುಟ್ ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದುಃಖ ಹಂಚಿಕೊಂಡಿದ್ದು, ‘ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು ಸಾನವನ್ನಪ್ಪಿದ್ದು ಹೆಣ್ಣುಮಗು ಬದುಕುಳಿದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ರೊನಾಲ್ಡೊ ತಮ್ಮ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರ ಜೊತೆ ಅವಳಿ ಮಕ್ಕಳ ಜನನದ ನಿರೀಕ್ಷೆಯಲ್ಲಿದ್ದರು. ಕಳೆದ ಅಕ್ಟೋಬರ್ ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಆದರೆ ಇದೀಗ ನವಜಾತ ಗಂಡು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ.

‘ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ನಾವು ಘೋಷಿಸಬೇಕಾಗಿದೆ, ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣ ನಮಗೆ ಸ್ವಲ್ಪ ಬದುಕುವ ಶಕ್ತಿ, ಭರವಸೆ ಮತ್ತು ಸಂತೋಷ ನೀಡಿದೆ. ವೈದ್ಯರು ಮತ್ತು ದಾದಿಯರಿಗೆ ಅವರ ಎಲ್ಲಾ ತಜ್ಞರ ಆರೈಕೆ ಮತ್ತು ಬೆಂಬಲಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವೆಲ್ಲರೂ ಕುಗ್ಗಿಹೋಗಿದ್ದೇವೆ. ಮತ್ತು ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ಕೇಳುತ್ತೇವೆ. ನಮ್ಮ ಮಗುವೇ, ನೀವು ನಮ್ಮ ದೇವತೆ. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೈಡ್ ಸೇರಿದಂತೆ ಹಲವರು ರೊನಾಲ್ಡೊ ದುಃಖವನ್ನ ಹಂಚಿಕೊಂಡಿದ್ದಾರೆ.

ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ಕ್ಲಬ್‌ ಕೂಡ ಸಂತಾಪ ಸೂಚಿಸಿ ವೆಬ್‌ಪುಟದಲ್ಲಿ ಪ್ರಕಟಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು