News Karnataka Kannada
Sunday, April 28 2024
ಕ್ರೀಡೆ

ವಿಶ್ವ ವನಿತಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ನಿಖತ್‌ ಜರೀನ್‌ ಸ್ವರ್ಣ ಸಾಧನೆ

Untitled 1
Photo Credit :

ಅಸ್ಸಾಂ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಹಾಗೂ ತೆಲಂಗಾಣದ ಯುವ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ,ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ  52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಸುಮಾರು ನಾಲ್ಕು ವರ್ಷಗಳ ನಂತರ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪರ ಇತಿಹಾಸ ನಿರ್ಮಿಸಿದ ನಿಖತ್, ದಿಗ್ಗಜ ಬಾಕ್ಸರ್‌ಗಳಾದ ಮೇರಿ ಕೋಮ್ ಮತ್ತು ಸರಿತಾ ದೇವಿ ಅವರ ಸಾಲಿಗೆ ಸೇರಿದರು.

ಥಾಯ್ಲೆಂಡ್ ಪ್ರತಿಸ್ಪರ್ಧಿಯನ್ನು ಸೋಲಿಸಿ 5-0 ಅಂತರದ ಸರ್ವಾನುಮತದ ತೀರ್ಪಿನ ಮೂಲಕ ಗೆದ್ದ ನಿಖತ್ ಜರೀನ್, ಈ ಗೆಲುವಿನೊಂದಿಗೆ ಜರೀನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಹಿಂದೆ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018) ಸರಿತಾ ದೇವಿ (2006), ಜೆನ್ನಿ ಆರ್ ಎಲ್ (2006) ಮತ್ತು ಲೇಖಾ ಕೆಸಿ (2006) ವಿಶ್ವ ಪ್ರಶಸ್ತಿ ಗೆದ್ದ ಇತರ ಆಟಗಾರ್ತಿಯರಾಗಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದ ಗೆದ್ದು ಇತಿಹಾಸ ನಿರ್ಮಿಸಿದ ನಿಖತ್ ಜರೀನ್, ಬಾಲ್ಯದಲ್ಲಿ  ಅನುಭವಿಸಿದ ಕಷ್ಟಗಳು, ನೋವುಗಳನ್ನು ಮೆಟ್ಟಿ ನಿಲ್ಲುವಲ್ಲಿ ಕುಟುಂಬದಿಂದ ಬೆಂಬಲ ಸಿಕ್ಕಿತ್ತು.

ದೌರ್ಬಲ್ಯಗಳನ್ನು ವ್ಯಾಯಾಮ ಮಾಡಿ ಮತ್ತು ಆಟದಲ್ಲಿ ಸುಧಾರಿಸಿಕೊಂಡಿರುವ ಈಕೆ ಬಾಕ್ಸಿಂಗ್‌ನಲ್ಲಿ ಬಲಗೊಳ್ಳಬೇಕಾದ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದರು. ನನ್ನ ವೃತ್ತಿಜೀವನದಲ್ಲಿ ನಾನು ಎದುರಿಸಿದ ಅಡೆತಡೆಗಳು ನನ್ನನ್ನು ಬಲವಾಗಿ ಬದಲಾಯಿಸಿದವು. ಮಾನಸಿಕವಾಗಿ ನಾನು ಬಲಶಾಲಿ. ಏನೇ ಆಗಲಿ ಹೋರಾಡಲೇಬೇಕು. ಅತ್ಯುತ್ತಮ ಪ್ರದರ್ಶನ ನೀಡಲು ಆಲೋಚನಾ ಕ್ರಮ ಬದಲಿಸಿಕೊಂಡರೂ 2017ರಲ್ಲಿ ಭುಜದ ಭುಜ ತಪ್ಪಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಒಂದು ವರ್ಷದಿಂದ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿಲ್ಲ. 2018 ರಲ್ಲಿ ಹಿಂತಿರುಗಿದ್ರೂ ಸಹ ಹಿಂದಿನ ರೂಪದಲ್ಲಿರಲ್ಲ. ಇದರೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕೈ ತಪ್ಪಿತು. ಆದರೂ ಕೂಡ ಛಲ ಬಿಡಲಿಲ್ಲ. 2019 ರಲ್ಲಿ ಮರು-ಪ್ರವೇಶದ ನಂತರ ಹಿಂತಿರುಗಿ ನೋಡಲಿಲ್ಲ ನಿಖತ್ ಜರೀನ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು