Categories: ಕ್ರೀಡೆ

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆನ್ನುವ ಭಾರತ ತಂಡದ ಕನಸು ದುಸ್ವಪ್ನವಾಯಿತು; ಗಾವಸ್ಕರ್

ಕೇಪ್ ಟೌನ್ : ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋಲನುಭವಿಸಿದೆ. ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫ್ರೀಡಂ ಕಪ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಟೀಂ ಇಂಡಿಯಾದ ಆಟಕ್ಕೆ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕಿಡಿಕಾರಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಕೆಲವು ನಡೆಗಳು ತನ್ನನ್ನು ತಬ್ಬಿಬ್ಬುಗೊಳಿಸಿದವು ಎಂದು ಗಾವಸ್ಕರ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆನ್ನುವ ಭಾರತ ತಂಡದ ಕನಸು ದುಸ್ವಪ್ನವಾಯಿತು ಎಂದು ಗಾವಸ್ಕರ್ ಟೀಕೆ ಮಾಡಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ಭಾರತವು ದೊಡ್ಡ ಗೆಲುವು ಸಾಧಿಸಿತ್ತು, ಹೀಗಾಗಿ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೂ ಅದೇ ಮಾದರಿಯಾಗಲಿದೆ ಎಂದು ನಾವು ಭಾವಿಸಿದೆವು. ಆದರೆ ಅದಾಗಲಿಲ್ಲ. ಎರಡೂ ಪಂದ್ಯಗಳಲ್ಲಿ ನಾವು ಏಳು ವಿಕೆಟ್ ಅಂತರದಿಂದ ಸೋಲನುಭವಿಸಿದೆವು ಎಂದಿದ್ದಾರೆ.

“ದಕ್ಷಿಣ ಆಫ್ರಿಕಾದ ಗೆಲುವಿನ ಅಂತರವು ಅದ್ಭುತವಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅರ್ಥಮಾಡಿಕೊಳ್ಳುವುದು ಕಷ್ಟ. ಮೊದಲ ಟೆಸ್ಟ್ ನಲ್ಲಿ ಪ್ರಾಬಲ್ಯ ಸಾಧಿಸಿದ ರೀತಿ, ಅವರು ಸರಣಿಯನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಪ್ರಬಲವಾಗಿರಲಿಲ್ಲ, ಆರ್ನಿಚ್ ನೋರ್ಜೆ ತಂಡದಿಂದ ಹೊರಬಿದ್ದ ಕಾರಣ ಆಫ್ರಿಕನ್ ಬೌಲಿಂಗ್ ನಲ್ಲೂ ಅನುಭವ ಕಡಿಮೆಯಿತ್ತು. ಹೀಗಾಗಿ ಭಾರತವು 3-0 ಅಂತರದಿಂದ ಸರಣಿ ಗೆಲ್ಲುತ್ತದೆ ಎಂದು ಭಾವಿಸಿದ್ದೆ” ಎಂದು ಗಾವಸ್ಕರ್ ಹೇಳಿದ್ದಾರೆ.

Gayathri SG

Recent Posts

ಪ್ರಹ್ಲಾದ ಜೋಶಿ ನಿವಾಸಕ್ಕೆ ಇಂದು ಸಚಿವ ಅರ್ಜುನರಾಮ್ ಮೇಘವಾಲ್ ಭೇಟಿ

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನರಾಮ್ ಮೇಘವಾಲ್ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ…

18 mins ago

ಮದುವೆ ದಿಬ್ಬಣದಲ್ಲಿ ಭೀಕರ ಅಪಘಾತ : ಲಾರಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಬಲಿ

ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರೋ ಘಟನೆ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ನಡೆದಿದೆ. ಭಾಗ್ಯಮ್ಮ…

37 mins ago

ಶತಕ ಸಿಡಿಸಿದ ವಿಲ್​ ಜಾಕ್ಸ್​ : ಆರ್​ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಗೆಲುವು

ವಿಲ್​ ಜ್ಯಾಕ್ಸ್ ​ಅವರ ಶತಕ ಬಾರಿಸಿದ್ದು ಅವರ ಭರ್ಜರಿ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಫಿದ ಆಗಿದ್ದಾರೆ. ಇನ್ನು ವಿರಾಟ್​ ಕೊಹ್ಲಿಯ(70*) ಅರ್ಧಶತಕದ…

56 mins ago

ಅಶ್ಲೀಲ ವಿಡಿಯೋ ಪ್ರಕರಣ : ತಂದೆ ಹೆಚ್​​ಡಿ ರೇವಣ್ಣ ವಿರುದ್ಧವೂ ಸಂತ್ರಸ್ಥೆ ದೂರು

ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದ್ದು ಇವರ ಜೊತೆ ಅವರ ತಂದೆ…

2 hours ago

ಜಿಂಕೆ ಕೊಂದು ಎಳೆದೊಯ್ದ ಹುಲಿ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ದೃಶ್ಯ

ಬಂಡೀಪುರದಲ್ಲಿ ಸಪಾರಿಗೆ ತೆರಳಿದ್ದ ವಾಹನಗಳ ಸನಿಹದಲ್ಲೇ ಹುಲಿಯೊಂದು ಜಿಂಕೆಯನ್ನ ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

3 hours ago

ಮೇ 29ಕ್ಕೆ ವಿಜಯಪುರಕ್ಕೆ ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಆಗಮನ

ಮುಂಬರುವ 7 ಮೇ 2024 ರಂದು ಜರುಗುವ ಸಾರ್ವತ್ರಿಕ ವಿಜಯಪುರ (ಮೀಸಲು) ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಸ್ಟಾರ್ ಪ್ರಚಾರಕರು…

3 hours ago