ಪ್ಯಾರೀಸ್: ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ಮಹಿಳಾ ಟೆನಿಸ್ ಅಸೋಸಿಯೇಷನ್ (ಡಬ್ಲ್ಯೂ ಟಿಎ) ಸೋಮವಾರ ಪ್ರಕಟಿಸಿದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವದ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಕಂಪ್ಯೂಟರೀಕೃತ ಶ್ರೇಯಾಂಕಗಳನ್ನು 1975 ರಲ್ಲಿ ಪರಿಚಯಿಸಿದ ನಂತರ ಈ ಐತಿಹಾಸಿಕ ಸಾಧನೆ ಮಾಡಿದ ಸ್ಪೇನ್ ನ ಎರಡನೇ ಆಟಗಾರ್ತಿ ಆಗಿದ್ದು, ಒಟ್ಟಾರೆ ಮಹಿಳೆಯರಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ 24 ನೇ ಮಹಿಳೆ ಆಗಿದ್ದಾರೆ.
ಕರೊಲಿನಾ ಪ್ಲಿಸ್ಕೊವಾದಿಂದ ಅವರನ್ನು ಹಿಂದಿಕ್ಕಿ 23 ರ ಹರೆಯದ ಮುಗುರುಜಾ, ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಕೊಕೊ ವಂದ್ವೀಘೆ ಅವರು ಯು.ಎಸ್ ಓಪನ್ ಪಂದ್ಯಾವಳಿಯಲ್ಲಿ ಪ್ಲಿಸ್ಕೊವಾರನ್ನು ಕ್ವಾರ್ಟರ್ ಫೈನಲ್ ಸೋಲಿಸಿದ ನಂತರ ಅವರು ನಂಬರ್ ಒನ್ ಪಟ್ಟದಿಂದ ಕೆಳಗಿಳಿದರು.
ನಾನು ಈ ಉನ್ನತ ಸ್ಥಾನವನ್ನು ದೀರ್ಘ ಕಾಲ ಉಳಿಸಿಕೊಳ್ಳಲು ಬಯಸುತ್ತೇನೆ. ರಾಫೆಲ್ ನಡಾಲ್ ಅವರೊಂದಿಗೆ ಅಂತಹ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು ನಾನು ಬಹಳ ಹೆಮ್ಮೆಪಡುತ್ತೇನೆ, ಡಬ್ಲ್ಯೂ ಟಿಎ ಶ್ರೇಯಾಂಕದಲ್ಲಿ ನಂಬರ್ ಒನ್ ಆದದ್ದು ಅತ್ಯಂತ ಸಂತಸ ತಂದಿದೆ. ಎಂದು ನಂಬರ್ ಒನ್ ಶ್ರೇಯಾಂಕಿತೆ ಗಾರ್ಬಿನ್ ಮುಗುರುಜಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.