Categories: ಕ್ರೀಡೆ

ಚಿನ್ನದ ಹುಡುಗನಿಗೆ ಗಣಿ ನಾಡಿನ ನಂಟು

ಬಳ್ಳಾರಿ : ಟೋಕಿಯೋ  ಒಲಿಂಪಿಕ್ಸ್  ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ  ಸಾಧನೆಯನ್ನ ಇಡೀ ದೇಶ  ಕೊಂಡಾಡುತ್ತಿದೆ . ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಜಾವೆಲಿನ್ ತರಬೇತಿ ಪಡೆದಿದ್ದು ಗಣಿನಾಡು ಬಳ್ಳಾರಿಯಲ್ಲಿ ಅನ್ನೋದು ಮತ್ತೊಂದು ವಿಶೇಷ.
ಹರಿಯಾಣ ಮೂಲದ ನೀರಜ್ ಚೋಪ್ರಾ ಜಿಂದಾಲ್ ಕಂಪನಿಯಲ್ಲಿರುವ Inspire Institute of Sports ನಲ್ಲಿ ತರಬೇತಿ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಕಂಪನಿ 2017 ರಲ್ಲಿ Inspire Institute of Sports ಆರಂಭಿಸಿದೆ. ಈ ಇನ್ಸ್ ಟ್ಯೂಟ್​ನಲ್ಲಿ ದೇಶದ ವಿವಿಧ ರಾಜ್ಯದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.
ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಈ ಇನ್ಸ್ ಟ್ಯೂಟ್​ನಲ್ಲಿ ತರಬೇತಿ ನೀಡಲಾಗುತ್ತಿದೆ. ದೇಶ-ವಿದೇಶಗಳ ತರಬೇತಿದಾರರು ಇಲ್ಲಿನ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಈಗ ಇದೇ ಇನ್ಸ್ ಟ್ಯೂಟ್ ನಲ್ಲಿಯೇ ಚಿನ್ನದ ಹುಡುಗ ನೀರಜ್ ಚೋಪ್ರಾ ಕೂಡ ಜಾವೆಲಿನ್ ಥ್ರೋ ತರಬೇತಿ ಪಡೆದಿದ್ದಾರೆ.
ಹರಿಯಾಣದ ಪಾನಿಪತ್​ನ ಖಾಂದ್ರ ಗ್ರಾಮದ 23 ವರ್ಷದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ತರಬೇತಿಗಾಗಿ 2017 ರಲ್ಲಿ ಬಳ್ಳಾರಿ ಜಿಲ್ಲೆ ಜಿಂದಾಲ್ ಕಂಪನಿಯಲ್ಲಿರುವ Inspire institute of sports ಗೆ ಸೇರಿಕೊಂಡಿದ್ದರು. 2017 ರಿಂದ 2020 ರವರೆಗೆ ಕೂಡ ನೀರಜ್ ಚೋಪ್ರಾ ಇಲ್ಲಿಯೇ ತರಬೇತಿ ಪಡೆದಿದ್ದಾರೆ. ಜೊತೆಗೆ ದೇಶದ ವಿವಿಧ ಕಡೆ ನಡೆದ ಜಾವೆಲಿನ್ ಥ್ರೋ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ ಪಟಿಯಾಲದಲ್ಲಿರುವ ಸ್ಪೋರ್ಟ್ ಆಥಾರಿಟಿ ಆಫ್ ಇಂಡಿಯಾ ದಲ್ಲಿ ಕೂಡ ತರಬೇತಿ ಪಡೆದಿದ್ದಾರೆ. ಅಲ್ಲದೇ ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ಯುರೋಪ್​ನಲ್ಲಿ ಕೂಡ ಕೆಲದಿನಗಳ ಕಾಲ ಅಭ್ಯಾಸ ಮಾಡಿದ್ದಾರೆ.
ಇನ್ನೂ ಜಿಂದಾಲ್ ಕಂಪನಿಯ Inspire institute of sports ನಲ್ಲಿ ತರಬೇತಿ ಪಡೆಯುತ್ತಿದ್ದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ನಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದರು. ಮೈದಾನದಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ವೇಳೆ ನಿರಂತರವಾಗಿ ಅಭ್ಯಾಸ ಮಾಡಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕು ಅಂತಾ ಕನಸು ಕಂಡಿದ್ದರಂತೆ. ಬೆಳಿಗ್ಗೆ 8 ಗಂಟೆಯಿಂದ ಬೆಳಿಗ್ಗೆ 10:30 ರವರೆಗೆ ಮೈದಾನದಲ್ಲಿ ಜಾವೆಲಿನ್ ಥ್ರೋ ಅಭ್ಯಾಸ ಮಾಡುತ್ತಿದ್ದರು. ಇದಾದ ಬಳಿಕ ಬೆಳಿಗ್ಗೆ 10:30 ರಿಂದ 11:30 ರವರೆಗೆ ಫಿಜಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಮಧ್ಯಾಹ್ನ ವಿಶಾಂತ್ರಿಯ ಬಳಿಕ ಮತ್ತೆ ಸಂಜೆಯವರೆಗೂ ಮೈದಾನದಲ್ಲಿಯೇ ನಿರಂತರವಾಗಿ ನೀರಜ್ ಚೋಪ್ರಾ ಪ್ರ್ಯಾಕ್ಟೀಸ್​ನಲ್ಲಿ ತೊಡಗಿಕೊಳ್ಳುತ್ತಿದ್ದರು. Inspire institute of sports ಜಿಂದಾಲ್ ತರಬೇತಿ ಪಡೆಯುವ ವೇಳೆ ಫ್ರಾನ್ಸ್ ಮೂಲದ ಆಂಥೋನಿ ತರಬೇತಿ ನೀಡುತ್ತಿದ್ದರಂತೆ.
ಜಿಂದಾಲ್ Inspire institute of sports ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂಬಂಧ 170 ಕ್ಕೂ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.
Raksha Deshpande

Recent Posts

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

16 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

30 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

47 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

1 hour ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

2 hours ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

2 hours ago