ದುಬೈ: ಮೊದಲ ಸಲ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲಿಗೆ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಮುಂಬಯಿ ಇಂಡಿಯನ್ಸ್ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ.
ಐಪಿಎಲ್ ನ ಅಗ್ರ ಎರಡು ಸ್ಥಾನ ಪಡೆದುಕೊಂಡಿರುವ ಮುಂಬಯಿ ಮತ್ತು ಡೆಲ್ಲಿ ಫೈನಲಿನಲ್ಲಿ ಸೆಣಸಲಿದೆ. ಒಟ್ಟು 14 ಪಂದ್ಯಗಳಲ್ಲಿ ಮುಂಬಯಿ 9 ಮತ್ತು ಡೆಲ್ಲಿ ಎಂಟು ಪಂದ್ಯಗಳನ್ನು ಗೆದ್ದುಕೊಂಡು ಪ್ರಶಸ್ತಿ ಸುತ್ತಿಗೇರಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಮುಂಬಯಿ ಪ್ಲೇ ಆಫ್ ಗೆ ಪ್ರವೇಶಿಸಿದ್ದ ಮೊದಲ ತಂಡವಾಗಿತ್ತು. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ವಿರುದ್ಧ ಗೆಲುವು ದಾಖಲಿಸಿಕೊಂಡಿದ್ದ ಡೆಲ್ಲಿ ಪ್ಲೇ ಆಫ್ ತಲುಪಿತ್ತು.
ಪ್ಲೇ ಆಫ್ ನಲ್ಲಿ ಡೆಲ್ಲಿ ಸೋಲಿಸಿದ್ದ ಮುಂಬಯಿ ಫೈನಲಿಗೆ ಪ್ರವೇಶಿಸಿತ್ತು. ಅದೇ ಹೈದರಾಬಾದ್ ನ್ನು ಪರಾಭವಗೊಳಿಸಿದ ಡೆಲ್ಲಿ ಫೈನಲ್ ತಲುಪಿದೆ.