News Karnataka Kannada
Monday, April 29 2024
ಕ್ರೀಡೆ

ಕೊಲ್ಕತ್ತಾ ವಿರುದ್ಧ 55 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ

Photo Credit :

ಕೊಲ್ಕತ್ತಾ ವಿರುದ್ಧ 55 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ

ನವದೆಹಲಿ: ದೆಹಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಟಿ-20 ಟೂರ್ನಿಯ 26ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು, ಕೋಲ್ಕತ್ತಾ ವಿರುದ್ಧ ಭರ್ಜರಿ 55 ರನ್ ಗಳ ಜಯ ದಾಖಲಿಸಿದೆ.

ಗೆಲ್ಲಲು 220 ರನ್ ಗಳ ಗುರಿ ಬೆನ್ನು ಹತ್ತಿದ ಕೋಲ್ಕತ್ತಾ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಕೊಲ್ಕತ್ತ ಪರ ಬ್ಯಾಟ್ಸ್ ಮನ್‌ಗಳು ರನ್ ಗಳಿಸುವ ಭರದಲ್ಲಿ ತಪ್ಪುಗಳನ್ನು ಮಾಡಿ ವಿಕೆಟ್ ಒಪ್ಪಿಸಿದರು.

ನರೇನ್ 26, ಉತ್ತಪ್ಪ 1, ರಾಣಾ 8, ಕ್ರಿಸ್ ಲೇನ್ 5, ದಿನೇಶ್ ಕಾರ್ತಿಕ್ 18 ರನ್ ಪೇರಿಸಿದರೆ, ನವ ಆಟಗಾರ ಶುಭ್ ಮನ್‌ ಗಿಲ್ 37 ರನ್ ಗಳಿಸಿದರು. ಆಂಡ್ರೆ ರಸೆಲ್ 40 ರನ್ ಗಳಿಸಿ ಪೆವಿಲಿಯನ್ ನತ್ತ ಸಾಗಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 219 ರನ್ ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಔಟಾಗದೆ, 40 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್ ಬಾರಿಸಿ ಭರ್ಜರಿ 93 ರನ್ ಪಡೆದರು.

ಪೃಥ್ವಿ ಶಾ 62 ರನ್, ಕಾಲಿನ್ ಮುನ್ರೋ 33 ರನ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ 27 ರನ್ ಗಳಿಸಿ ಉತ್ತಮ ಆಟವಾಡಿದರು. ಡೆಲ್ಲಿ ಪರ ಅವಿಶ್ ಖಾನ್, ಟ್ರೆಂಟ್ ಬೌಲ್ಟ್, ಮ್ಯಾಕ್ಸ್‌ವೆಲ್, ಅಮಿತ್ ಮಿಶ್ರಾ ತಲಾ ಎರಡು ವಿಕೆಟ್ ಗಳಿಸಿದರೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಶ್ರೇಯಸ್ ಅಯ್ಯರ್ ಭಾಜನರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು