News Karnataka Kannada
Thursday, May 09 2024
ಕ್ರೀಡೆ

ಐಸಿಸಿ ಪುರುಷರ ಟಿ 20 ರ‍್ಯಾಂಕಿಂಗ್ ಪಟ್ಟಿ ಪ್ರಕಟ, ಐದನೇ ಸ್ಥಾನಕ್ಕೇರಿದ ಕೆ.ಎಲ್.ರಾಹುಲ್

Kl Rahul 14082021
Photo Credit :

ದುಬೈ : ಐಸಿಸಿ ಪುರುಷರ ಟಿ 20 ರ‍್ಯಾಂಕಿಂಗ್  ಪಟ್ಟಿ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನದಿಂದ ಏಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಂಟನೇ ಸ್ಥಾನದಲ್ಲಿದ್ದ ಕೆ.ಎಲ್.ರಾಹುಲ್ ಐದನೇ ಸ್ಥಾನಕ್ಕೇರಿದಿದ್ದಾರೆ.

698 ರೇಟಿಂಗ್ ಪಾಯಿಂಟ್ ನೊಂದಿಗೆ ಐದನೇ ಸ್ಥಾನದಿಂದ ವಿರಾಟ್ 8ನೇ ಸ್ಥಾನಕ್ಕೆ ಕುಸಿದರೆ, ರಾಹುಲ್ 727 ಪಾಯಿಂಟ್ ಗಳಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಉಳಿದಂತೆ ಪಾಕಿಸ್ಥಾನದ ನಾಯಕ ಬಾಬರ್ ಅಜಮ್ 839 ಪಾಯಿಂಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್ (800), ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾಕ್ರ್ರಾಮ್ ಇದ್ದಾರೆ.ವಿಶ್ವಕಪ್ ಗೂ ಮುನ್ನ ಎಂಟನೇ ಸ್ಥಾನದಲ್ಲಿದ್ದ ಮಾಕ್ರ್ರಾಮ್, ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಲಂಕಾ ಆಲ್ ರೌಂಡರ್ ವನಿಂದು ಹಸರಂಗ 797 ರೇಟಿಂಗ್ ಪಾಯಿಂಟ್ ಗಳಿಂದ ಮೊದಲನೇ ಸ್ಥಾನದಲ್ಲಿದ್ದಾರೆ.ಆಲ್ ರೌಂಡರ್ ವಿಭಾಗದಲ್ಲಿ ಅಫ್ಘಾನಿಸ್ಥಾನದ ಆಲ್ ರೌಂಡರ್ ಮೊಹಮ್ಮದ್ ನಬಿ ಮೊದಲನೇ ಸ್ಥಾನದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು