ಬೆಂಗಳೂರು: ಈ ವರ್ಷದ ಐಪಿಎಲ್ ನಲ್ಲಿ ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಐಪಿಎಲ್ ಹರಾಜಿನ ಮೊದಲ ದಿನ ಕೆಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಕೋಟಿ ಕೋಟಿಗೆ ಹರಾಜಾದ ಬಳಿಕ ಎರಡನೇ ದಿನ ಆಲ್ ರೌಂಡರ್ ಕೆ. ಗೌತಮ್ 6.20 ಕೋಟಿಗೆ ಹರಾಜಾಗಿದ್ದಾರೆ.
ಕೆ. ಗೌತಮ್ ಅವರನ್ನು ರಾಜಸ್ಥಾನ ರಾಯಲ್ಸ್ ಮೂಲ ಬೆಲೆಗಿಂತ 31 ಸಲ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಿದೆ. ಕೆ. ಗೌತಮ್ ಗೆ 20 ಲಕ್ಷ ರೂ. ಮೂಲ ಬೆಲೆಯಾಗಿತ್ತು. ಕಳೆದ ವರ್ಷ ಮುಂಬಯಿ ಇಂಡಿಯನ್ಸ್ ಗೌತಮ್ ನ್ನು 2 ಕೋಟಿಗೆ ಖರೀದಿ ಮಾಡಿತ್ತು.
ಇದೇ ವೇಳೆ ಜಯದೇವ್ ಉನದ್ಕತ್ ಗರಿಷ್ಠ ಬೆಲೆಗೆ ಖರೀದಿಯಾಗಿರುವ ಭಾರತೀಯ ಆಟಗಾರನಾಗಿದ್ದಾರೆ. ಉನದ್ಕತ್ ಅವರನ್ನು ರಾಜಸ್ಥಾನ್ ರಾಯಲ್ಸ್ 11.50 ಕೋಟಿ ರೂ.ಗೆ ಖರೀದಿ ಮಾಡಿದೆ. ನಿನ್ನೆ ಬೆನ್ ಸ್ಟೋಕ್ಸ್ 12.5 ಕೋಟಿ ರೂ. ಗೆ ಹರಾಜಾಗಿದ್ದರು. ಇದುವರೆಗೆ ಹರಾಜಾಗಿರುವ ಭಾರತೀಯ ಆಟಗಾರರಲ್ಲಿ ಉನದ್ಕತ್ ಗರಿಷ್ಠ ಮೊತ್ತ ಪಡೆದಿದ್ದಾರೆ.