ಕ್ರೀಡೆ

ಐಪಿಎಲ್‌ನಿಂದ ಗಳಿಸುವ ಹಣದಿಂದ ಹೆತ್ತವರಿಗಾಗಿ ಮನೆ ಖರೀದಿಸುವ ಗುರಿ ಇದೆ; ತಿಲಕ್‌ ವರ್ಮ

ಮುಂಬಯಿ : “ಇನ್ನೂ ನಮ್ಮದೇ ಆದ ಸ್ವಂತ ಮನೆ ಹೊಂದಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್‌ನಿಂದ ಗಳಿಸುವ ಹಣದಿಂದ ಹೆತ್ತವರಿಗಾಗಿ ಮನೆ ಖರೀದಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ತಿಲಕ್‌ ವರ್ಮ ಹೇಳಿದ್ದಾರೆ.

2020ರ ಅಂಡರ್‌-19 ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ತಿಲಕ್‌ ವರ್ಮ ಅವರನ್ನು ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ 1.7 ಕೋಟಿ ರೂ.ಗೆ ಖರೀದಿಸಿದೆ. ಮುಂಬೈ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಸೋತಿದ್ದರೂ ತಿಲಕ್‌ ವರ್ಮ ಉತ್ತಮ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. 22 ಮತ್ತು 61 ರನ್‌ ಗಳಿಸುವ ಮೂಲಕ ತಂಡವನ್ನು ಆಧರಿಸಿದ್ದಾರೆ.

“ನಾವು ಬೆಳೆಯುತ್ತಿರುವಂತೆ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದೇವೆ. ತಂದೆ ತನ್ನ ಅಲ್ಪ ಸಂಬಳದಲ್ಲಿ ನನ್ನ ಕ್ರಿಕೆಟ್‌ ವೆಚ್ಚದ ಜತೆಗೆ ಅಣ್ಣನ ವಿದ್ಯಾಭ್ಯಾಸದ ಖರ್ಚನ್ನು ನೋಡಬೇಕಿತ್ತು. ಕಳೆದ ಕೆಲವು ವರ್ಷಗಳಿಂದ ಸ್ವಲ್ಪಮಟ್ಟಿನ ಪ್ರಾಯೋಜಕತ್ವ ಮತ್ತು ಪಂದ್ಯಕ್ಕೆ ನೀಡಿದ ಹಣದಿಂದ ನನ್ನ ಕ್ರಿಕೆಟಿನ ವೆಚ್ಚವನ್ನು ನಿಭಾಯಿಸುತ್ತಿದ್ದೇನೆ’ ಎಂದು ವರ್ಮ ಹೇಳಿದ್ದಾರೆ.

“ಇದೀಗ ಐಪಿಎಲ್‌ ಹರಾಜು ಮೂಲಕ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ಹೆತ್ತವರಿಗಾಗಿ ಮನೆ ಖರೀದಿಸುವ ಗುರಿ ಇಟ್ಟುಕೊಂಡಿದ್ದೇನೆ. ಐಪಿಎಲ್‌ನಲ್ಲಿ ಸಿಗುವ ಹಣದಿಂದ ನನ್ನ ಕ್ರೀಡಾಬಾಳ್ವೆಯ ಇನ್ನುಳಿದ ದಿನಗಳಲ್ಲಿ ಆರಾಮವಾಗಿ ಆಡಬಹುದು’ ಎಂದವರು ತಿಳಿಸಿದರು.

“ಐಪಿಎಲ್‌ ಹರಾಜು ನಡೆಯುತ್ತಿದ್ದ ದಿನ ನನ್ನ ಕೋಚ್‌ ಜತೆ ವೀಡಿಯೋ ಕಾಲ್‌ ಮಾಡಿದ್ದೆ. ಹರಾಜಿನಲ್ಲಿ 1.7 ಕೋಟಿ ರೂ.ಗಳಿಗೆ ಮುಂಬೈ ಖರೀದಿಸಿದಾಗ ಅವರು ಭಾವುಕರಾದರು. ಆ ಬಳಿಕ ಹೆತ್ತವರಿಗೆ ಕರೆ ಮಾಡಿದಾಗ ಅವರು ಕೂಡ ಭಾವೋದ್ವೇಗಕ್ಕೆ ಒಳಗಾದರು. ಅವರಿಂದ ಮಾತೇ ಹೊರಡಲಿಲ್ಲ’ ಎಂದು ತಿಲಕ್‌ ವರ್ಮ ಹೇಳಿದರು.

Gayathri SG

Recent Posts

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

20 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

34 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

53 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

1 hour ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

2 hours ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

2 hours ago