News Karnataka Kannada
Thursday, May 02 2024
ಕ್ರೀಡೆ

ಏಷ್ಯನ್ ಆರ್ಚರಿ ಚಾಂಪಿಯನ್​ಶಿಪ್​: ಜ್ಯೋತಿ ಸುರೇಖ ವೆಣ್ಣಮ್ ಗೆ ಸಿಂಗಲ್ಸ್​ನಲ್ಲಿ ಚಿನ್ನ, ಡಬಲ್ಸ್​ನಲ್ಲಿ ಬೆಳ್ಳಿ ಪದಕ

Jyothi Surekha Vennam
Photo Credit :

ಏಷ್ಯನ್ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ದಕ್ಷಿಣ ಕೊರಿಯಾದ ಓಹ್ ಯೂಹ್ಯುನ್ ಅವರನ್ನು ಒಂದು ಅಂಕದಿಂದ ಮಣಿಸಿ ಕಾಂಪೌಂಡ್​ ವಿಭಾಗದಲ್ಲಿ ಜ್ಯೋತಿ ಸುರೇಖ ವೆಣ್ಣಮ್ ಚಿನ್ನದ ಪದಕದ ಗೆದ್ದಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ಯಂಕ್ಟಾನ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ 3 ಬೆಳ್ಳಿ ಪದಕಗಳನ್ನು ಗೆದ್ದಿದ್ದ ಜ್ಯೋತಿ ಫೈನಲ್​ನಲ್ಲಿ ಓಹ್ ಯೂಹ್ಯುನ್ ಅವರನ್ನು 146-145 ಅಂಕಗಳ ಅಂತರದಿಂದ ಮಣಿಸಿ ಏಷ್ಯನ್​ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಗಣನೀಯ ಸಾಧನೆ ತೋರಿದ್ದಾರೆ.

ಇದಕ್ಕೂ ಮುನ್ನ ಸೆಮಿಫೈಲ್​​ನಲ್ಲಿ 2015ರ ವಿಶ್ವಚಾಂಪಿಯನ್​ ಕಿಮ್ ಯುನ್ಹೀ ವಿರುದ್ಧ ಭಾರತೀಯ ಬಿಲ್ಲುಗಾರ್ತಿ 148-143 ಅಂಕಗಳ ಅಂತರದಲ್ಲಿ ಜಯ ಸಾಧಿಸಿದ್ದರು.

ಸಿಂಗಲ್ಸ್​ನಲ್ಲಿ ಚಿನ್ನ ಗೆದ್ದ ಜ್ಯೋತಿ ವೆಣ್ಣಮ್ ಮಿಶ್ರ ಡಬಲ್ಸ್​ನಲ್ಲೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಜ್ಯೋತಿ ಮತ್ತು ರಿಷಭ್ ಯಾದವ್​ ಜೋಡಿ ಕೊರಿಯಾದ ಅಗ್ರ ಶ್ರೇಯಾಂಕದ ಕಿಮ್ ಯುನ್ಹೀ ಮತ್ತು ಚೋಯ್ ಯಂಗ್ಹೀ ಜೋಡಿ ವಿರುದ್ಧ 155-154 ಅಂತರದಿಂದ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು