News Karnataka Kannada
Thursday, May 02 2024
ಕ್ರೀಡೆ

ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ ಭಾರತದ ಮಹಿಳಾ ತಂಡದ ಆಟಗಾರ್ತಿ ವಿ.ಆರ್‌. ವನಿತಾ

Vr Vanitha (1)
Photo Credit :

ಹೊಸದಿಲ್ಲಿ : ಎಂಟು ವರ್ಷಗಳ ಹಿಂದೆ ಭಾರತದ ಮಹಿಳಾ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ ಆರಂಭಿಕ ಆಟಗಾರ್ತಿ ವಿ.ಆರ್‌. ವನಿತಾ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.

ಮೂಲತಃ ಕರ್ನಾಟಕದವರಾದ ವೆಲ್ಲ ಸ್ವಾಮಿ ರಾಮು ವನಿತಾ 2014-16ರ ಅವಧಿಯಲ್ಲಿ ಭಾರತದ ಪರ 6 ಏಕದಿನ ಮತ್ತು 16 ಟಿ20 ಪಂದ್ಯಗಳನ್ನಾಡಿದ್ದರು.ಏಕದಿನದಲ್ಲಿ 85 ರನ್‌, ಟಿ20ಯಲ್ಲಿ 216 ರನ್‌ ಮಾಡಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧದ ವಿಶಾಖಪಟ್ಟಣ ಏಕದಿನ ಪಂದ್ಯದಲ್ಲಿ ಮೊದಲ ಸಲ ಭಾರತವನ್ನು ಪ್ರತಿನಿಧಿಸಿದ್ದರು.

ಸೋಮವಾರ ಟ್ವೀಟ್‌ ಮೂಲಕ ವನಿತಾ ತಮ್ಮ ವಿದಾಯವನ್ನು ಸಾರಿದರು. ತಂಡದ ಹಿರಿಯ ಆಟಗಾ ರರಾದ ಜೂಲನ್‌ ಮತ್ತು ಮಿಥಾಲಿಗೆ, ಕುಟುಂಬದ ಸದಸ್ಯರಿಗೆ, ಮೆಂಟರ್‌ ಹಾಗೂ ಗೆಳೆಯರಿಗೆಲ್ಲ ವನಿತಾ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

“19 ವರ್ಷಗಳ ಹಿಂದೆ ನಾನು ಕ್ರಿಕೆಟ್‌ ಆಡತೊಡಗಿದಾಗ ಕ್ರೀಡೆಯ ಮೇಲೆ ಅಪಾರ ಒಲವು ಹೊಂದಿದ್ದ ಪುಟ್ಟ ಹುಡುಗಿ ಆಗಿದ್ದೆ. ಇಂದಿಗೂ ನನ್ನ ಕ್ರಿಕೆಟ್‌ ಪ್ರೀತಿ ಅದೇ ಮಟ್ಟದಲ್ಲಿದೆ. ನನ್ನ ಹೃದಯ ಆಟ ಮುಂದುವರಿಸುವಂತೆ ಕೇಳಿಕೊಂಡರೂ ದೇಹ ಸ್ಪಂದಿಸುತ್ತಿಲ್ಲ’ ಎಂದು 31 ವರ್ಷದ ವನಿತಾ ಹೇಳಿದರು. ದೇಶಿ ಕ್ರಿಕೆಟ್‌ನಲ್ಲಿ ಅವರು ಕರ್ನಾಟಕ ಮತ್ತು ಬಂಗಾಲವನ್ನು ಪ್ರತಿನಿಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು