ತೌರಂಗ, ನ್ಯೂಜಿಲೆಂಡ್: ಇಂದು ಭಾರತ ಪುರುಷರ ತಂಡ ಇಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಜಪಾನ್ ತಂಡದ ಎದುರು ಪಂದ್ಯಾಟ ಆಡಲಿದೆ. ಇನ್ನೂ ಐದು ದಿನಗಳ ಪ್ರತ್ಯೇಕ ಹಾಕಿ ಸರಣಿಯಲ್ಲಿ ಭಾರತ ತಂಡವು ಜಪಾನ್ ಸೇರಿದಂತೆ ಬೆಲ್ಜಿಯಂ ಹಾಗೂ ನ್ಯೂಜಿಲೆಂಡ್ ಎದುರು ಕೂಡ ಪಂದ್ಯಾಟ ಆಡಲಿದೆ.
ಬ್ಲೇಕ್ ಪಾರ್ಕ್ನಲ್ಲಿ ನಡೆದ ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ಭಾರತ ತಂಡ ಭಾಗವಹಿಸಿತ್ತು. ಇದರಿಂದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿದೆ ಎಂದು ರೂಪಿಂದರ್ ಪಾಲ್ ಹೇಳಿದ್ದಾರೆ.