News Karnataka Kannada
Monday, April 29 2024
ಕ್ರೀಡೆ

ಅರ್ಜುನ ಪ್ರಶಸ್ತಿಗೆ ರೋಹನ್- ಭಾಂಬ್ರಿ ಹೆಸರು ಶಿಫಾರಸು

Photo Credit :

ಅರ್ಜುನ ಪ್ರಶಸ್ತಿಗೆ ರೋಹನ್- ಭಾಂಬ್ರಿ ಹೆಸರು ಶಿಫಾರಸು

ನವದೆಹಲಿ: ಟೆನಿಸ್ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಮತ್ತು ಡಬಲ್ಸ್ ಆಟಗಾರ ಖ್ಯಾತ ಟೆನಿಸ್ ಪಟು ರೋಹನ್ ಬೋಪಣ್ಣ ಅವರ ಹೆಸರನ್ನು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಭಾರತದ ಈ ಪ್ರತಿಭಾನ್ವಿತ ಇಬ್ಬರು ಟೆನಿಸ್ ಆಟಗಾರರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವ ವಿಚಾರವನ್ನು ಎಐಟಿಎ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ ಖಚಿತಪಡಿಸಿದ್ದಾರೆ.

ಯೂಕಿ ಭಾಂಬ್ರಿ ಇತ್ತೀಚೆಗಷ್ಟೇ ಟೆನಿಸ್ ವಿಶ್ವ ರ‍್ಯಾಂಕಿಂಗ್ ನಲ್ಲಿ ಅಗ್ರ ನೂರರೊಳಗೆ ಗುರುತಿಸಿಕೊಂಡು ಗಮನ ಸೆಳೆದಿದ್ದರು. ಪ್ರಕಟಿತ ಹೊಸ ರ‍್ಯಾಂಕಿಂಗ್ ನಲ್ಲಿ ಅವರು ಜೀವನ ಶ್ರೇಷ್ಠ 83ನೇ ರ‍್ಯಾಂಕಿಂಗ್ ಗೆ ಏರಿದ ಸಾಧನೆ ಮಾಡಿದ್ದರು.

ಇನ್ನು ರೋಹನ್ ಬೋಪಣ್ಣ ಅವರ ಹೆಸರನ್ನು ಕಳೆದ ವರ್ಷವೇ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಆದರೆ ನಾಮಪತ್ರ ಸಲ್ಲಿಸಲು ಅವಕಾಶ ಮುಗಿದಿದ್ದ ಕಾರಣ ಪ್ರಶಸ್ತಿ ಲಭ್ಯವಾಗಿರಲಿಲ್ಲ.

ಅಲ್ಲದೇ ಜಾವೆಲಿನ್ ಥ್ರೊ ಸ್ಪರ್ಧಿ ಅನುರಾಣಿ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಜಯಿಸಿರುವ ಡಿಸ್ಕಸ್ ಥ್ರೊ ಸ್ಪರ್ಧಿ ಸೀಮಾ ಪುನಿಯಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ನೀರಜ್ ಚೋಪ್ರಾಗೆ ಖೇಲ್ ರತ್ನ ಪ್ರಶಸ್ತಿ:

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಅವರ ಹೆಸರನ್ನು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಕಾಮನ್‌ವೆಲ್ತ್ ಕ್ರೀಡಾ ಕೂಟದ ಜಾವೆಲಿನ್ ಥ್ರೊ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಅವರ ಭಾಜನರಾಗಿದ್ದಾರೆ.

ಇನ್ನು ಹಿರಿಯ ಅಥ್ಲೀಟ್ ಹಾಗೂ ಕೋಚ್ ಪಿ.ಟಿ ಉಷಾ ಮತ್ತು ಭಾರತ ಯೂತ್ ತಂಡದ ಕೋಚ್ ಸಂಜಯ್ ಗರ್ ನಾಯಕ್ ಅವರ ಹೆಸರನ್ನು ಭಾರತ ಅಥ್ಲೆಟಿಕ್ಸ್ ಫೆಡರೇಶನ್ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು