News Karnataka Kannada
Wednesday, May 01 2024
ಕ್ರೀಡೆ

ಅಫ್ಘಾನ್‌ನ 32 ಫುಟ್ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕಿಸ್ತಾನದಲ್ಲಿ ಆಶ್ರಯ

Football
Photo Credit :

ಅಫ್ಘಾನಿಸ್ತಾನ :  ತಾಲಿಬಾನಿಗಳ ಕಪಿಮುಷ್ಠಿಗೆ ಸಿಕ್ಕಾಗಿನಿಂದಲೂ ಅಲ್ಲಿನ ಮಹಿಳೆಯರ ಸ್ಥಿತಿ ಹೇಳದಂತಾಗಿದೆ.
ಅದರಲ್ಲಿಯೂ ಮಹಿಳೆಯರ ಕ್ರೀಡೆಗೆ ತಾಲಿಬಾನಿಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಪುರುಷರ ತಂಡಗಳಿಗೆ ತಾಲಿಬಾನ್ ಬೆಂಬಲ ನೀಡುತ್ತಿದ್ದು, ಮಹಿಳಾ ಆಟಗಾರ್ತಿಯರಿಗೆ ಮನೆಯಲ್ಲೇ ಇರುವಂತೆ ತಾಲಿಬಾನ್ ಹೇಳಿದೆ.

ಇದೇ ಕಾರಣಕ್ಕೆ ಇದೀಗ ಅಫ್ಘಾನ್‌ನ 32 ಫುಟ್ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ.
ಆಟಗಾರ್ತಿಯರು ಹಾಗೂ ಅವರ ಕುಟುಂಬಕ್ಕೆ ತಾಲಿಬಾನಿಗಳು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಆಟಗಾರರು ರಾಷ್ಟ್ರೀಯ ಕಿರಿಯರ ತಂಡವರಾಗಿದ್ದಾರೆ. ಮೊದಲು ಕತಾರ್‌ಗೆಪಯಣ ಬೆಳೆಸಬೇಕಿತ್ತು. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸ್ಫೋಟದ ನಂತರ ಎಲ್ಲಿಗೂ ತೆರಳುವುದು ಅಸಾಧ್ಯವಾಯಿತು. ಇದೀಗ ಆಟಗಾರರನ್ನು ಸ್ಥಳಾಂತರಿಸಲು ಪಾಕಿಸ್ತಾನ ಸರ್ಕಾರ ಸಹಾಯ ಮಾಡಿದ್ದು, ತುರ್ತು ಮಾನವೀಯ ವೀಸಾಗಳನ್ನು ನೀಡಿದೆ.

ಈ ಆಟಗಾರ್ತಿಯರನ್ನು ದೇಶದಿಂದ ಹೊರತರಲು ಬ್ರಿಟನ್ ಎನ್‌ಜಿಒ,ಪಾಕಿಸ್ತಾನ ಸರ್ಕಾರ ಮತ್ತು ಫುಟ್‌ಬಾಲ್ ಫೆಡರೇಶನ್ ಸಹಕಾರ ನೀಡಿದೆ. ಫೆಡರೇಶನ್‌ನಲ್ಲಿ ಆಶ್ರಯ ಪಡೆದು ತದನಂತರ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಶೀಘ್ರದಲ್ಲೇ ಆಟಗಾರರನ್ನು ಲಾಹೋರ್‌ಗೆ ಸಾಗಿಸಿ ಅಲ್ಲಿನ ಫುಟ್‌ಬಾಲ್ ಫೆಡರೇಶನ್‌ನ ಪ್ರಧಾನ ಕಚೇರಿಯಲ್ಲಿ ಇರಿಸಲಾಗುವುದು. ಆಟ ಆಡದಂತೆ ಆಟಗಾರ್ತಿಯರಿಗೆ ತಾಲಿಬಾನ್ ಬೆದರಿಸಿದ್ದರು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು