ಮೇಷ ರಾಶಿ: ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗಲಿದ್ದೀರಿ. ಉದ್ಯೋಗದ ಕಾರಣಕ್ಕೆ ಅಲೆದಾಟ ಅತಿಯಾಗಬಹುದು.

ವೃಷಭ ರಾಶಿ: ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದಿಕೊಂಡವರಿಗೆ ಸರಿಯಾದ‌ ಮಾಹಿತಿಯನ್ನು ಕೊಡುವಿರಿ.‌ ಇಂದು ನಿಮ್ಮ ಆಲಸ್ಯವು ಯಶಸ್ಸಿನ ಶತ್ರುವಾಗಬಹುದು. ಸುಳ್ಳು ಹೇಳಿಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಬಹುದಿ. ಧಾರ್ಮಿಕ ವಿಚಾರಕ್ಕೆ ನೀವು ಹೆಚ್ಚು ಒತ್ತಡುವಿರಿ.

ಮಿಥುನ ರಾಶಿ: ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ಅನಿವಾರ್ಯವಾಗಿ ನೀವು ಬದಲಾಯಿಸಿದ ವೃತ್ತಿಗೇ ಹೋಗಬೇಕಾಗುವುದು. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ನಿಮಗೆ ಕೆಲವು ಜವಾಬ್ದಾರಿಗಳು ಬಂದು ಗಂಭೀರವಾಗುವಿರಿ.

ಕಟಕ ರಾಶಿ: ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ಆಪ್ತರ ಜೊತೆ ಅನೇಕ ದಿನಗಳ ಅನಂತರ ನೀವು ಕಾಲಕಳೆಯುವಿರಿ. ಇದು ನಿಮಗೆ ಸಂತೋಷವನ್ನು ಕೊಡುವುದು. ಯಾವ ಮೆಚ್ಚುಗೆಯನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಲಾರಿರಿ. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಇಂದು ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.