Bengaluru 23°C
Ad

ವಿಶ್ವ ದಾಖಲೆ ಬರೆದ ಹಳೆಯ ಪೇಂಟಿಂಗ್ ಬಟ್ಟಲು : 314 ಕೋಟಿಗೆ ಖರೀದಿಸಿದ ಉದ್ಯಮಿ

ಚೀನಾದ ಹಾಂಗ್ ಕಾಂಗ್‌ನಲ್ಲಿ ಹುಬ್ಬೇರಿಸುವ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ವ್ಯಕ್ತಿ ಹಳೆಯ ಬಟ್ಟಲನ್ನು ಮಾರಾಟ ಮಾಡಲು ಮುಂದಾದಾಗ ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಬಟ್ಟಲನ್ನು ಖರೀದಿ ಮಾಡಿದ್ದಾನೆ. ಅಷ್ಟಕ್ಕೂ ಈ ಬಟ್ಟಲಿನ ವಿಶೇಷತೆಯಾದರೂ ಏನು.

ನವದೆಹಲಿ : ಚೀನಾದ ಹಾಂಗ್ ಕಾಂಗ್‌ನಲ್ಲಿ ಹುಬ್ಬೇರಿಸುವ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ವ್ಯಕ್ತಿ ಹಳೆಯ ಬಟ್ಟಲನ್ನು ಮಾರಾಟ ಮಾಡಲು ಮುಂದಾದಾಗ ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಬಟ್ಟಲನ್ನು ಖರೀದಿ ಮಾಡಿದ್ದಾನೆ. ಅಷ್ಟಕ್ಕೂ ಈ ಬಟ್ಟಲಿನ ವಿಶೇಷತೆಯಾದರೂ ಏನು..

ವಿಚಿತ್ರವೆಂದರೆ ವಜ್ರಕ್ಕೂ ಮೀರಿದ ಮೌಲ್ಯ ಹೊಂದಿರುವ ಈ ಬಟ್ಟಲು ಅಕ್ಷಯ ಪಾಯತ್ರೆಯಂತು ಅಲ್ಲ. ಆದರೆ ಈ ಬಟ್ಟಲು ಚೀನಾದ ಉತ್ತರ ಭಾಗದ ಸಾಂಗ್ ರಾಜಮನೆತನಕ್ಕೆ ಸೇರಿದ ಬರೋಬ್ಬರಿ 1,000 ವರ್ಷಗಳಷ್ಟು ಹಳೆಯದು ಎಂಬುದು ಇದರ ವಿಶೇಷತೆ ಆಗಿದೆ. ಹೀಗಾಗಿ ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾನೆ.

ಇನ್ನು ಮೇಲೆ ಕಾಣಿಸುವ ಈ ಬಟ್ಟಲು ಹಾಂಗ್ ಕಾಂಗ್ ನಲ್ಲಿ ನಡೆದ ಹರಾಜಿನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಈ ಚಿಕ್ಕ ಬಟ್ಟಲು ಚೀನಾದ ಉತ್ತರ ಸಾಂಗ್ ರಾಜವಂಶಕ್ಕೆ ಸೇರಿದೆ. ಈ ಬಟ್ಟಲಿನ ಹರಾಜಿನಲ್ಲಿ ಹಲವಾರು ಶ್ರೀಮಂತರು ಭಾಗವಹಿಸಿದ್ದರು. ಕೆಲವರು ನೇರವಾಗಿ ಭಾಗವಹಿಸಿದರೆ, ಇನ್ನು ಕೆಲವರು ಆನ್‌ಲೈನ್ ಹರಾಜಿನಲ್ಲಿಯೂ ಪಾಲ್ಗೊಂಡಿದ್ದರು.

ಈ ಬಟ್ಟಲನ್ನು ಸೋಥೆಬಿಸ್ ಎನ್ನುವವರು ಆರಂಭದಲ್ಲಿ 67 ಕೋಟಿ ರೂ.ಗೆ ಮಾರಾಟ ಮಾಡಲು ಹರಾಜಿಗಿಟ್ಟಿದ್ದರು. ಆದರೆ, ಉದ್ಯಮಿಗಳು ಹಾಗೂ ಶ್ರೀಮಂತರು ಈ ಬಟ್ಟಲನ್ನು ನಾವೇ ಖರೀದಿ ಮಾಡಬೇಕು, ರಾಜ ವಂಶದ ಹೆಗ್ಗಳಿಗೆ ನಮಗೆ ಸಿಗಬೇಕು ಎಂದು ಜಿದ್ದಿಗೆ ಬಿದ್ದವರಂತೆ ಬೆಲೆ ಏರಿಸಿ ಬಿಡ್ ಕೂಗಿದ್ದಾರೆ. ಕೊನೆಗೆ 20 ನಿಮಿಷಗಳ ಅಂತರದಲ್ಲಿ ಬಟ್ಟಲು ಮೂಲ ಹರಾಜು ಬೆಲೆಗಿಂತ 5 ಪಟ್ಟು ಹೆಚ್ಚಳಕ್ಕೆ ಏರಿಸಿ 314 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad