ವಿಶೇಷ:  ಜುಲೈ ಎರಡನೇ ಶುಕ್ರವಾರವನ್ನು ವಿಶ್ವದಾದ್ಯಂತ ವಿಶ್ವ ಕಬಾಬ್ ದಿನ ಎಂದು ಆಚರಿಸಲಾಗುತ್ತದೆ. ಕಬಾಬ್​ ಎಂದರೆ ಸಾಕು ಮಾಂಸಹಾರಿಗಳ ಬಾಯಲ್ಲಿ ನಿರೂರುತ್ತೆ. ಸದ್ಯ ಭಾರತದಲ್ಲೇ ನಾನಾ ತರಹದ ರೆಸಿಪಿಗಳಲ್ಲಿ ಕಬಾಬ್​ಗಳನ್ನು ತಯಾರಿಸಲಾಗುತ್ತಿದೆ. ಅದರೆ ಚಿಕನ್​ ಕಬಾಬ್​ಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್​ ಇದೆ.
Chicken Kabab Recipe Main Photo

ಕಬಾಬ್​​ ಮಧ್ಯಪ್ರಾಚ್ಯದ ಆಹಾರ. ಟರ್ಕಿಯಲ್ಲಿ ಕಬಾಬ್ ಅನ್ನು ತಯಾರಿಸಲಾಯಿತು.​ ಮಾಂಸಗಳ ತುಂಡನ್ನು ಗ್ರಿಲ್​ ಮಾಡಿ ಬೇಯಿಸಿ ತಯಾರಿಸಲಾಗುತ್ತಿತ್ತು. ಆ ಬಳಿಕ ಕಬಾಬ್​ ಇರಾನ್​, ಭಾರತದಲ್ಲೂ ಭಾರೀ ಜನಪ್ರಿಯತೆ ಪಡೆಯಿತು. ಅಂದಹಾಗೆಯೇ ಕಬಾಬ್​ ಎಂದರೆ ಟರ್ಕಿ ಭಾಷೆಯಲ್ಲಿ “ಬೇಯಿಸಿದ ಮಾಂಸ”ವೆಂದು ಅರ್ಥ.

ಇನ್ನು ಸಾಮಾನ್ಯ ಚಿಕನ್​ ಕಬಾಬ್​ ಒಂದೆಡೆಯಾದರೆ, ತಂದೂರಿ ಚಿಕನ್​ ಕಬಾಬ್​, ಸೀಖ್​ ಕಬಾಬ್, ಮಲೈ ಚಿಕನ್​ ಕಬಾಬ್​, ಚಾಪ್ಲಿ ಕಬಾಬ್​​, ಕಲ್ಮಿ ಕಬಾಬ್​, ಗಲೌಟಿ ಕಬಾಬ್​, ಶಮಿ, ಬೆಳ್ಳುಳ್ಳಿ ಕಬಾಬ್​, ಪನೀರ್​ ಟಿಕ್ಕಾ, ಬೀಟ್ರೂಟ್​​ ಕಬಾಬ್​ ಕೂಡ ಜನಪ್ರಿಯತೆ ಪಡೆದ ಖಾದ್ಯವಾಗಿದೆ.

ಇನ್ನು ಕಬಾಬ್​ 19ನೇ ಶತಮಾನದಲ್ಲಿ (1800) ಮಧ್ಯಪ್ರಾಚ್ಯದಲ್ಲಿ ಕಾಣಿಸಿಕೊಂಡಿತು. ಟರ್ಕಿ ಮತ್ತು ಪರ್ಷಿಯಾ ಜನರು ಕಬಾಬ್​ ಅನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. 1900ರ ವೇಳೆಗೆ ಕಬಾಬ್​​ ಎಂಬ ಆಹಾರ ಜಾಗತಿಕವಾಗಿ ಪಸರಿಸಿತು. ಬಳಿಕ ದೇಶ ದೇಶಕ್ಕೆ ಪಸರಿಸಿದಂತೆ ರೆಸಿಪಿಗಳು ಬದಲಾಗತೊಡಗಿದವು.

Skewer 3370443
2015ರಲ್ಲಿ ಮೊದಲ ಕಬಾಬ್​ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜುಲೈ 12ರಂದು ವಿಶ್ವ ಕಬಾಬ್​ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.