ವಿಜಯ ದಶಮಿ ಹಬ್ಬವನ್ನ ನವರಾತ್ರಿಯ ಕೊನೆಯ ದಿನ ಎನ್ನಲಾಗುತ್ತದೆ. ಈ ದಿನವೇ ರಾಮ ರಾವಣನ ವಿರುದ್ಧ ಜಯಗಳಿಸಿದ ಎನ್ನುವ ನಂಬಿಕೆ ಇದೆ. ವಿಜಯದಶಮಿ ಹಬ್ಬವನ್ನು ವಿವಿಧ ಜಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಅಶ್ವಿನ್ ಮಾಸದ ಶುಕ್ಲ ಪಕ್ಷದ ದಿನಾಂಕದಂದು ದಸರಾವನ್ನು ಆಚರಿಸಲಾಗುತ್ತದೆ. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾದ ಹಬ್ಬವಾದ ದಸರಾವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪೂಜೆಯ ಶುಭ ಮುಹೂರ್ತ ಹೀಗಿದೆ
ಈ ದಿನ ವಿಜಯ ಮುಹೂರ್ತವು ಮಧ್ಯಾಹ್ನ 02:02 ರಿಂದ 02:49 ರವರೆಗೆ ಇರುತ್ತದೆ. ಅದೇ ರೀತಿ ಅಕ್ಟೋಬರ್ 13 ರಂದು ಮಧ್ಯಾಹ್ನ 01:16 ರಿಂದ 03:35 ರವರೆಗೆ ಪೂಜೆಗೆ ಶುಭ ಸಮಯ ಇರಲಿದ್ದು, ಈ ಸಮಯದಲ್ಲಿ ಪೂಜೆ ಮಾಡಬಹುದು. ಈ ವರ್ಷ, ಶ್ರಾವಣ ನಕ್ಷತ್ರವು ಅಕ್ಟೋಬರ್ 12 ರಂದು ಬೆಳಿಗ್ಗೆ 05:25 ರಿಂದ ಪ್ರಾರಂಭವಾಗಿ ಮರುದಿನ ಅಂದರೆ ಅಕ್ಟೋಬರ್ 13 ರಂದು ಬೆಳಿಗ್ಗೆ 04:27 ಕ್ಕೆ ಕೊನೆಗೊಳ್ಳುತ್ತದೆ. ಅಕ್ಟೋಬರ್ 12 ರಂದು ವಿಜಯ್ ಮುಹೂರ್ತವು ಮಧ್ಯಾಹ್ನ 12: 46 ರಿಂದ 01:31 ರವರೆಗೆ ಇರುತ್ತದೆ. ಇದಲ್ಲದೆ,ಅಭಿಜಿತ್ ಮುಹೂರ್ತವು ರಾತ್ರಿ 11:44 ರಿಂದ 12:30 ರವರೆಗೆ. ಸಂಜೆ 05:54 ರಿಂದ 06:19 ರವರೆಗೆ ಸಂಧ್ಯಾ ಮುಹೂರ್ತ. ಇದರ ಜೊತೆಗೆ ಅತ್ಯಂತ ಶೂಭ ಮುಹೂರ್ತವು ಮಧ್ಯಾಹ್ನ 02:2 ರಿಂದ 02:48 ರವರೆಗೆ ಇರುತ್ತದೆ. ಈ ಅವಧಿಯು ಒಟ್ಟು 46 ನಿಮಿಷಗಳವರೆಗೆ ಇರುತ್ತದೆ.
ವಿಜಯದಶಮಿ ಮಹತ್ವ ಹೀಗಿದೆ
ನಂಬಿಕೆಗಳ ಪ್ರಕಾರ ಈ ದಿನ ಶ್ರೀರಾಮನು ರಾವಣನನ್ನು ಕೊಂದ ಎನ್ನಲಾಗುತ್ತದೆ. ಹಾಗಾಗಿ ಈ ಶುಭ ಸಂದರ್ಭದಲ್ಲಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಶ್ರೀರಾಮನನ್ನು ಪೂಜಿಸಲಾಗುತ್ತದೆ. ಇನ್ನು ಈ ದಿನ ತಪ್ಪದೇ ಮಾಡುವ ಕೆಲ ಪೂಜೆಗಳು ಇಲ್ಲಿದೆ.
ಶಮಿ ಪೂಜೆ: ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾದ ಶಮೀ ವೃಕ್ಷಕ್ಕೆ ಈ ದಿನ ಪೂಜೆ ಮಾಡಬೇಕು. ಈ ಮರವು ಮಹಾಭಾರತದ ಸಮಯದಲ್ಲಿ ಪಾಂಡವರ ವನವಾಸಕ್ಕೆ ಸಾಕ್ಷಿಯಾಗಿದ್ದು, ಅಜ್ಞಾತವಾಸದ ಸಮಯದಲ್ಲಿ ಈ ಮರದಲ್ಲಿಯೇ ಶಸ್ತ್ರಗಳನ್ನ ಇಟ್ಟಿದ್ದರು. ನಂಬಿಕೆಗಳ ಪ್ರಕಾರ ಅವರ ಅಜ್ಞಾತವಾಸ ಕೊನೆಯಾಯಿತು ಎನ್ನುವ ನಂಬಿಕೆ ಸಹ ಇದೆ.
ರಾವಣ ದಹನ: ಉತ್ತರ ಭಾರತದ ಭಾಗಗಳಲ್ಲಿ ಈ ದಿನ ರಾವಣ ದಹನವನ್ನ ಮಾಡಲಾಗುತ್ತದೆ. ಇದರ ಅರ್ಥ ಕೆಟ್ಟ ದ್ದರ ವಿರುದ್ಧ ಜಯವಾಗಲಿದ್ದು, ಇನ್ನು ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು.
ವಿಜಯದಶಮಿ ಪೂಜೆ ಮಾಡುವುದು ಹೇಗೆ?
ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ಈ ದಿನ ಆದಷ್ಟು ಬೇಗ ಏಳಬೇಕು. ಮನೆಯನ್ನು ಸ್ವಚ್ಛಗೊಳಿಸಿ, ದೇವರಿಗೆ ಪೂಜೆಯನ್ನ ಆರಂಭ ಮಾಡಬೇಕು. ಇನ್ನು ವಿಜಯದಶಮಿ ದಿನ ದೇವರ ಮನೆಯನ್ನ ಸಹ ಸ್ವಚ್ಛ ಮಾಡಬೇಕು. ಈ ದಿನ ತಪ್ಪದೇ ರಾಮನಿಗೆ ಪೂಜೆ ಮಾಡಬೇಕು. ನಂಬಿಕೆಗಳ ಪ್ರಕಾರ ಈ ವಿಜಯದಶಮಿಯಂದು ಹಸುವಿನ ಸಗಣಿಯನ್ನ ತಂದು ರಾವಣ ವಿಗ್ರಹವನ್ನ ಸಹ ಮಾಡಿ ಕೆಲವರು ಆಚರಣೆ ಮಾಡುತ್ತಾರೆ.

