ವಾರ್ಸಾವ್: ಪೋಲ್ಯಾಂಡ್ ಕನ್ನಡಿಗರು ಸಂಘಟನೆಯು “ಯುಗಾದಿ ಸಂಭ್ರಮ – 2025” ಅನ್ನು ವಾರ್ಸಾವ್‌ನಲ್ಲಿ ಅದ್ಧೂರಿಯಾಗಿ ಆಯೋಜಿಸಿತು. ಈ ಹಬ್ಬವು ಕನ್ನಡಿಗರನ್ನು ಒಂದುಗೂಡಿಸಿ, ನಮ್ಮ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸ್ಮರಿಸಲು ಒಂದು ಅದ್ಭುತ ವೇದಿಕೆಯಾಗಿತ್ತು.
ಈ ಕಾರ್ಯಕ್ರಮವು ಯುಗಾದಿ ಹಬ್ಬದ ಪೂಜೆ, ಬೇವು ಬೆಲ್ಲ ವಿತರಣೆ, ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಖಾದ್ಯ ಮೇಳ ಮತ್ತು ಸ್ನೇಹ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ರಮಗಳನ್ನೊಳಗೊಂಡಿತ್ತು.
ಯುಗಾದಿ, ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಘ ಮಾಸದ ಮೊದಲ ದಿನದಂದು ಆಚರಿಸಲ್ಪಡುವ ಹೊಸ ವರ್ಷದ ಹಬ್ಬವಾಗಿದೆ. ಈ ಹಬ್ಬದ ದಿನವನ್ನು ನಾವು ಹಳೆಯ ವರ್ಷದಿಂದ ಹೊಸ ವರ್ಷಕ್ಕೆ ಕಾಲಿಡುವ ದಿನವಾಗಿ ಆಚರಿಸುತ್ತೇವೆ.

ಈ ಬಾರಿ “ಪೋಲ್ಯಾಂಡ್ ಕನ್ನಡಿಗರು” ಸಂಘದಿಂದ ವಾರ್ಸೋದಲ್ಲಿ ಆಯೋಜಿಸಿದ್ದ ಯುಗಾದಿ ಹಬ್ಬವನ್ನು ಕೇವಲ ಕನ್ನಡಿಗರು ಮಾತ್ರವಲ್ಲದೆ, ಪೋಲ್ಯಾಂಡ್‌ನಲ್ಲಿರುವ ಇನ್ನಿತರ ಭಾರತೀಯರು ಹಾಗೂ ಪೋಲ್ಯಾಂಡ್‌ನ ಪ್ರಜೆಗಳೊಂದಿಗೆ ಒಟ್ಟುಗೂಡಿ ಹರ್ಷದಿಂದ ಆಚರಿಸಲಾಯಿತು.
ಗಣ್ಯ ಅತಿಥಿಗಳ ಉಪಸ್ಥಿತಿ
ಕಾರ್ಯಕ್ರಮವನ್ನು ಪ್ರತಿಷ್ಠಿತ ಅತಿಥಿಗಳು ತಮ್ಮ ಆಗಮನದಿಂದ ಅಲಂಕರಿಸದ್ದರು:
1. Mr. Mohan Lal – Head of Chancery, Embassy of India, Poland.
2. Mr. Satyasheel Lall – Second Secretary (Press, Information, Culture & Education), Embassy of India, Poland.
3. Harish Lalwani – Prominent Businessman and President of Hindu Mandir in Warsaw.
4. Ms. Anna Maliszewska – Founder, International Trilingual School of Warsaw.
5. Mr. Xavier Despringre – Financial and Administrative Director, International Trilingual School of Warsaw.
ಪೋಲಾಂಡ್ ಕನ್ನಡಿಗರ ಸಂಘಟನೆಯ ಅಧ್ಯಕ್ಷರಾದ ಸಚಿನ್ ಪಾರ್ಥ ಅವರು ಮುಖ್ಯ ಅತಿಥಿಗಳನ್ನು ಬರಮಾಡಿಕೊಂಡರು. ಅಲ್ಲಿ ನೆಲೆಸಿದಂತಹ ಎಲ್ಲಾ ಪ್ರೇಕ್ಷಕರಿಗೆ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು.
ಯುವಕರ ಮತ್ತು ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶಕರಾದ ಕಾರ್ತಿಕ್ ಚಂದ್ರಶೇಖರ್ ಅವರು, ಪೋಲಂಡ್ ಕನ್ನಡಿಗರ ಸಂಘದ ಪರಿಚಯವನ್ನು ನೀಡಿದರು. ಅವರು ಸಂಘದ ದೃಷ್ಟಿಕೋನ, ಉದ್ದೇಶ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಉಪಸ್ಥಿತರಿಗೆ ಮಾಹಿತಿ ನೀಡಿದರು.

ಅತಿಥಿಗಳು ಯುಗಾದಿಯ ಮಹತ್ವವನ್ನು ವಿವರಿಸಿ, ಪೋಲ್ಯಾಂಡ್ ಕನ್ನಡಿಗರು ಸಂಘಟನೆಯ ಶ್ಲಾಘನೀಯ ಕಾರ್ಯಗಳನ್ನು ಮೆಚ್ಚಿದರು. ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದರೂ ತಮ್ಮ ಸಂಸ್ಕೃತಿಯನ್ನು ಮರೆಯದೆ ಪಸರಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದ್ದು ವಿವಿಧ ಭಾರತೀಯ ಖಾದ್ಯಗಳು ಹಾಗೂ ಕರ್ನಾಟಕದ ಸಿಹಿ-ಖಾರ ತಿನಿಸುಗಳ ಮೇಳ. ಉತ್ಸವದಲ್ಲಿ ಪ್ರತಿ ಒಂದು ತಿನಿಸುಗಳ ರುಚಿಯನ್ನು ಸವಿಯಲು ಅವಕಾಶವಿತ್ತು. ಕರ್ನಾಟಕದ ಸಾಂಪ್ರದಾಯಿಕ ಭೋಜನ ಹಾಗೂ ಭಾರತೀಯ “ಫಾಸ್ಟ್ ಫುಡ್” ಆಹಾರಗಳ ವಿಶಿಷ್ಟ ಮೇಳ ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಿದವು.
ಈ ಉತ್ಸವವು ಕನ್ನಡಿಗರಿಗೆ ಹಬ್ಬದ ಸಂಭ್ರಮವನ್ನು ಕೊಂಡಾಡುವ ಉತ್ಸಾಹಭರಿತ ವೇದಿಕೆಯಾಗಿತ್ತು. ವಿವಿಧ ಕಲಾವಿದರು ಕನ್ನಡ ನೃತ್ಯ, ಹಾಡು, ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿದರು.
“ಆದರ್ಶ ದಂಪತಿಗಳು” ಸ್ಪರ್ಧೆ
ಈ ಬಾರಿಯ ಇನ್ನೊಂದು ವಿಶೇಷವೆಂಬಂತೆ “ಆದರ್ಶ ದಂಪತಿಗಳು” ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅನೇಕ ದಂಪತಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ಯೂರೋಪ್ ಮಟ್ಟದ ಆನ್‌ಲೈನ್ ಚೆಸ್ ಸ್ಪರ್ಧೆ – ಕನ್ನಡಿಗರ ಪ್ರತಿಭೆ ಚಿಮ್ಮಿದ ಕ್ಷಣ!
ಈ ಬಾರಿ, ಪೋಲ್ಯಾಂಡ್ ಕನ್ನಡಿಗರು ಸಂಘಟನೆಯು ಕನ್ನಡಿಗರಿಗಾಗಿ ಯೂರೋಪ್ ಮಟ್ಟದ ಆನ್‌ಲೈನ್ ಚೆಸ್ ಸ್ಪರ್ಧೆ ಆಯೋಜಿಸಿತು. ಈ ಸ್ಪರ್ಧೆಯಲ್ಲಿ ಪೋಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಸ್ಪೇನ್, ಸ್ವಿಟ್ಜರ್ಲೆಂಡ್, ಮತ್ತು ಸ್ವೀಡನ್ ನ ಕನ್ನಡಿಗರು ತಮ್ಮ ಚಾತುರ್ಯ ಪ್ರದರ್ಶಿಸಿದರು.
📢 ವಿಜೇತರು:
🔰 ಬಿಗಿನ್ನರ್ ವಿಭಾಗ:
🏆 1st Place: ಕಬಿಲನ್
🥈 2nd Place: ವಿಜಯೇಶ್
🔰 ಇಂಟರ್‌ಮೀಡಿಯೇಟ್ ವಿಭಾಗ:
🏆 Winner: ಪ್ರತ್ಯುಷ್
🥈 Runner-up: ಪ್ರಿಯಾಂಕಾ
ಈ ಚೆಸ್ ಸ್ಪರ್ಧೆಯ ಯಶಸ್ಸು ಯೂರೋಪ್ ಕನ್ನಡಿಗರ ಒಗ್ಗಟ್ಟಿನ ಪ್ರತೀಕವಾಗಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸ್ಪರ್ಧೆಗಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಲು ಬೆಂಬಲ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
“ಯುಗಾದಿ ಸಂಭ್ರಮ – 2025” ಕಾರ್ಯಕ್ರಮವು ಪೋಲ್ಯಾಂಡ್ ಕನ್ನಡಿಗರು ಸಂಘಟನೆ ನಡೆಸಿದ ಮತ್ತೊಂದು ಯಶಸ್ವಿ ಉತ್ಸವ. ಕನ್ನಡಿಗರು ಮಾತ್ರವಲ್ಲ, ಭಾರತೀಯರು ಹಾಗೂ ಪರಭಾಷೀಯರು ಕೂಡ ಈ ಹಬ್ಬವನ್ನು ಹತ್ತಿರದಿಂದ ಅನುಭವಿಸಿದರು. ಪೈಲೊಟ್ ಪ್ರಾಜೆಕ್ಟ್‌ಗಳಂತೆ ಕನ್ನಡ ಕಲೆ, ಭಾಷಾ ಕಛೇರಿ, ಮಕ್ಕಳಿಗಾಗಿ ಕನ್ನಡ ತರಗತಿಗಳು ಮತ್ತು ಕನ್ನಡಿಗರ ಒಗ್ಗಟ್ಟು, ಇವುಗಳನ್ನುಈ ಕಾರ್ಯ ಕ್ರಮದಲ್ಲಿ ಎತ್ತಿ ಹಿಡಿಯಲಾಯಿತು.
ಈ ಅದ್ಭುತ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಬೆಂಬಲಿಸಿದ ಸಹಭಾಗಿತ್ವದ ದತ್ತಿಗಳು, ಸ್ವಯಂಸೇವಕರು, ಹಾಗೂ ಪಾಲ್ಗೊಂಡ ಎಲ್ಲಾ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಮ್ಮ ಸಂಸ್ಕೃತಿಯನ್ನು, ಭಾಷೆಯನ್ನು, ಪರಂಪರೆಯನ್ನು ಪೋಷಿಸುವ ಈ ಹಬ್ಬಗಳು ಕನ್ನಡಿಗರ ಅಸ್ತಿತ್ವವನ್ನು ಸಾರುತ್ತವೆ. ಮುಂದಿನ ವರ್ಷ ಮತ್ತೊಂದು ಅದ್ಭುತ ಉತ್ಸವಕ್ಕಾಗಿ ಕಾಯೋಣ!
ಯುಗಾದಿ ಹಬ್ಬವು ಸುಂದರವಾದ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಪ್ರತಿಬಿಂಬಿಸುವ ದಿನವಾಗಿದೆ. ಈ ಬಾರಿ ವಾರ್ಸೋದಲ್ಲಿ ನಡೆದ ಈ ಅದ್ಭುತ ಹಬ್ಬವು ನವಚೈತನ್ಯವನ್ನು ಹೊತ್ತಿದ್ದು, ಸಮುದಾಯದ ಸಂಬಂಧಗಳನ್ನು ಇನ್ನಷ್ಟು ಸದೃಢಗೊಳಿಸಿತು.

