ಕೃಷಿ ವಿಶ್ವವಿದ್ಯಾಲಯ, ರಾಯಚೂರಿನಡಿಯ, ಕೃಷಿ ಮಹಾವಿದ್ಯಾಲಯ ಕಲಬುರಗಿ, ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ ಹಾಗೂ ಕೃಷಿ ಇಲಾಖೆ, ಸೇಡಂ ಸಹಯೋಗದೊಂದಿಗೆ ರೈತರಿಗೆ ಒಂದು ದಿನದ ತರಬೇತಿಯನ್ನು ನ.21ರಂದು “ತೋಟಗಾರಿಕೆ ಬೆಳೆಗಳಲ್ಲಿ ಸಂರಕ್ಷಿತ ಬೇಸಾಯ ಕ್ರಮಗಳು ಹಾಗೂ ಎಣ್ಣೆಕಾಳು ಬೆಳೆಗಳ ಸಮಗ್ರ ಬೇಸಾಯ ಕ್ರಮಗಳು” ಈ ಶೀರ್ಷಿಕೆ ಯೊಂದಿಗೆ ಸೇಡಂ ತಾಲೂಕಿನ ಕಡ್ಚಲಾ ಗ್ರಾಮದಲ್ಲಿ ತರಬೇತಿ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಕು. ದೇವಿಕಾ ರವರು ವೇದಿಕೆಯ ಗಣ್ಯರನ್ನು ಮತ್ತು ರೈತರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯನ್ನು ಕು. ಚೈತ್ರಾ ಮತ್ತು ಭಾರತಿ ಹಾಡುವುದರ ಮೂಲಕ ರವರು ಕಾರ್ಯಕ್ರಮವನ್ನು ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಪಿ. ವಾಸುದೇವ ನಾಯ್ಕ ರವರು ಉದ್ಘಾಟಿಸಿ ರೈತರು ಪ್ರಸ್ತುತ ಸನ್ನಿವೇಶಗಳ ಬಗ್ಗೆ ಅವಲೊಕಿಸಿ ತೋಟಗಾರಿಕಾ ಬೆಳೆ ಬೆಳೆಯಲು ಮುಂದೆ ಬಂದು ಹೆಚ್ಚಿನ ಆದಾಯ ಪಡೆಯಲು ಕರೆ ನೀಡಿದರು. ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಕರಬೂಜು ಇತರೆ ಹಣ್ಣುಗಳ ಬೆಳೆ, ಹೂವಿನ ಬೆಳೆ ಹಾಗೂ ಸಾಂಬಾರ ಬೆಳೆಗಳನ್ನು ರೈತರು ಕಡಿಮೆ ಬೆಳೆದು ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆದು ಆರ್ಥಿಕವಾಗಿ ಸ್ವಾಲಂಭಿಯಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಇದೇ ವೇಳೆ ಡಾ. ಜ್ಞಾನದೇವ ಬುಳ್ಳಾ, ವಿಜ್ಞಾನಿ (ಬೀಜ ವಿಜ್ಞಾನ) ರವರು ಮಾತನಾಡಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳ ತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ನಿಡಿದರು. ಡಾ. ಮಲ್ಲಪ್ಪ, ವಿಜ್ಞಾನಿ (ಬೇಸಾಯಶಾಸ್ತç) ಮಾತನಾಡುತ್ತಾ ತೊಗರಿ ಬೆಳೆಯಲ್ಲಿ ಬಂದಿರು ಗೊಡ್ಡು ರೋಗದ ಬಗ್ಗೆ ತಿಳುವಳಿಕೆ ನಿಡಿ ಸಮಗ್ರ ರೋಗ & ಕೀಟ ನಿರ್ವಹಣೆ ಕುರಿತು ವಿಶೇಷವಾಗಿ ತಿಳಿಸಿದರು.
ಡಾ. ಚಂದ್ರಕಾಂತ. ವಿಜ್ಞಾನಿ (ಮಣ್ಣು ವಿಜ್ಞಾನ) ಮಾತನಾಡಿ ಮಣ್ಣಿನ ಮಾದರಿ ತೆಗೆಯುವ ರೀತಿ ಮತ್ತು ಮಣ್ಣನ್ನು ಉಪಚರಿಸುವುದು ಹಾಗೂ ಮಣ್ಣು ಪರೀಕ್ಷೆ ಅನುಗುಣವಾಗಿ ರಸಗೊಬ್ಬರ ಬಳಕೆ ಮಾಡಿ ರೈತರು ಖರ್ಚುನ್ನು ಕಡಿಮೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಇದೇ ಸಂಧರ್ಬದಲ್ಲಿ ಡಾ. ಮಹಾಂತೇಶ ಜೋಗಿ, ಸಹಾಯಕ ಪ್ರಾದ್ಯಪಕರು, ಕೃಷಿ ಮಹಾವಿದ್ಯಾಲಯ ಕಲಬುರಗಿ ರವರು ಕಲ್ಲಂಗಡಿ ಬೆಳೆ ಉತ್ಪಾದನೆ ಬಗ್ಗೆ ವಿವರಣೆ ನೀಡಿದರು.
ಇದೇ ವೇಳೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ.ವಿಶಾಲಕುಮಾರ ರವರು ಮಾತನಾಡಿ ಇಲಾಖೆಯ ಪ್ರಮುಖ ಯೋಜನೆಗಳು ಮತ್ತು ಸವಲತ್ತುಗಳ ಕುರಿತು ತಿಳಿಸಿ ಅವುಗಳ ಸದುಪಯೋಗ ಪಡೆಯಲು ಹೇಳಿದರು. ನಿರೂಪಣೆಯನ್ನು ಕು. ಪಲ್ಲವಿ ರವರು ನಡೆಸಿಕೊಟ್ಟರು. ಕೊನೆಯದಾಗಿ ಕು. ಅನುಷಾ ವಂನಾರ್ಪಣೆಯನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಶ್ರೀ ಭೀಮರೆಡ್ಡಿ, ಗ್ರಾಮದ ರೈತರು, ಗ್ರಾಮದ ವಿವಿಧ ಪ್ರತಿನಿಧಿಗಳು ಹಾಗೂ ಕೃಷಿ ಮಹಾವಿದ್ಯಾಲಯ ಕಲಬುರಗಿಯ ಬಿ.ಎಸ್ಸಿ (ಕೃಷಿ) ಅಂತಿಮ ವರ್ಷದ ವಿಧ್ಯಾಥಿಗಳಾದ ಪಲ್ಲವಿ, ದೇವಿಕಾ, ಚೈತ್ರಾ, ಭಾರತಿ, ಆನುಷಾ, ಅನಯಗೌಡ, ಭರತ, ಯಾಸಿನ, ಚಂದನ & ಕಿರಣ ಹಾಗೂ ಸುಮಾರು 200 ಕ್ಕೊ ಹೆಚ್ಚು ರೈತರು ಭಾಗಿಯಾಗಿ ಕಾರ್ಯಕ್ರಮದ ಸದುಪಯೋಗ ಪಡೆದರು. ಉಪಸ್ಥಿರಿದರು.

