ಇಂದು ಸಂಭವಿಸಲಿರುವ ಸೂರ್ಯಗ್ರಹಣವು ವರ್ಷದ ಮೊದಲನೆಯ ಸೂರ್ಯಗ್ರಹಣವಾಗಿದ್ದು, 2025 ರ ಮೊದಲ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಮಧ್ಯಾಹ್ನ 2:20 ರಿಂದ ಸಂಜೆ 6:13ರ ವರೆಗೆ ಸಂಭವಿಸುತ್ತದೆ.
ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯಗ್ರಹಣ ಭಾರತದಲ್ಲೂ ಗೋಚರಿಸದಿದ್ದರೂ, ಜ್ಯೋತಿಷ್ಯದಲ್ಲಿ, ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಚಂದ್ರ ಭೂಮಿ ಮತ್ತು ಸೂರ್ಯನ ನಡುವೆ ನಿಖರವಾಗಿ ಒಂದೇ ಸಮಯದಲ್ಲಿ ಹಾದು ಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಕ್ಷಣವು ಸಂಭವಿಸಿದಾಗ, ಚಂದ್ರನು ಸೂರ್ಯನನ್ನು ಮರೆ ಮಾಚುತ್ತಾನೆ. ಅದರ ಕಿರಣಗಳು ಭೂಮಿಯನ್ನು ತಲುಪದಂತೆ ತಡೆಯುತ್ತಾನೆ. ಇದರ ಪರಿಣಾಮವಾಗಿ, ಈ ಅಪರೂಪದ ವಿದ್ಯಮಾನವನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ಮುಂಬರುವ ಗ್ರಹಣದ ಸಮಯದಲ್ಲಿ 54 ಪ್ರತಿಶತದಷ್ಟು ಸೂರ್ಯನನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸೂರ್ಯಗ್ರಹಣ ಆರಂಭವಾಗುವ ಮೊದಲು ಸ್ನಾನ ಮಾಡಿ. ಮಂತ್ರಗಳನ್ನು ಪಠಿಸುವ ಸಂಕಲ್ಪ ಮಾಡಿ. ಗ್ರಹಣವು ಗರಿಷ್ಠ ಹಂತಕ್ಕೆ ತಲುಪಿದಾಗ ನಿಮ್ಮ ಇಷ್ಟದೇವತೆ ಅಥವಾ ಸೂರ್ಯ ದೇವನನ್ನು ಪ್ರಾರ್ಥಿಸಿ, ಈ ದೇವರಿಗೆ ಸಂಬಂಧಪಟ್ಟ ಯಾವುದೇ ಮಂತ್ರವನ್ನಾದರೂ ಪಠಿಸಿ. ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ, ಗೋಧಿ ಅಥವಾ ನಿಮ್ಮಿಂದ ಸಾಧ್ಯವಾಗುವಂತಹ ವಸ್ತುವನ್ನು ಯಾರಿಗಾದರೂ ದಾನ ಮಾಡಬಹುದು, ಇಲ್ಲವಾದರೆ ದೇವಾಲಯಕ್ಕೂ ನೀಡಬಹುದು.
ಗ್ರಹಣದ ಅವಧಿಯಲ್ಲಿ ಯಾವುದೇ ಧಾರ್ಮಿಕ ಗ್ರಂಥವನ್ನು ಪಠಿಸಬಹುದು. ಶ್ರೀ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದು ಕೂಡಾ ಹೆಚ್ಚು ಪರಿಣಾಮಕಾರಿ. ಗ್ರಹಣಾನಂತರ ಪವಿತ್ರನದಿ ಅಥವಾ ತೀರ್ಥಯಾತ್ರಾಸ್ಥಳಗಳಲ್ಲಿ ಮಾಡುವ ಸ್ನಾನ ಹಾಗೂ ದಾನಗಳು ಫಲಪ್ರದವಾಗುವುದೆಂಬ ನಂಬಿಕೆ ಇದೆ. ಇದು ವಾರ್ಷಿಕ ಸೂರ್ಯಗ್ರಹಣವಾದ್ದರಿಂದ ಇದರ ಪರಿಣಾಮಗಳು ಹೆಚ್ಚು.
ಸೂರ್ಯಗ್ರಹಣ ಸಮಯದಲ್ಲಿ ಯಾವುದೇ ಅಡುಗೆ ಮಾಡಬಾರದು, ಜೊತೆಗೆ ಯಾವುದೇ ಆಹಾರ ಪದಾರ್ಥಳನ್ನು ಬೇಯಿಸಬಾರದು ಅಥವಾ ಯಾವುದೇ ತರಕಾರಿ ಮತ್ತು ಹಣ್ಣುಗಳನ್ನು ಕತ್ತರಿಸಬೇಡಿ. ಹಾಗೇ ಮನೆಯಲ್ಲಿ ಈಗಾಗಲೇ ಮಾಡಿರುವಂತಹ ಆಹಾರ ಪದಾರ್ಥಗಳು, ಹಾಲಿನ ಪದಾರ್ಥಗಳಿದ್ದರೆ ಅದಕ್ಕೆ ತುಳಸಿ ಎಲೆಯನ್ನು ಹಾಕಿಡಿ.
ಇದರ ಹೊರತಾಗಿ ನಂಬಿಕೆಗಳ ಪ್ರಕಾರ, ಗ್ರಹಣ ಸಮಯದಲ್ಲಿ ಆಹಾರ ಅಥವಾ ನೀರನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀರ್ಣಶಕ್ತಿ ದುರ್ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
ಗ್ರಹಣದ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗೆ ಮಾಡುವುದರಿಂದ ಆ ಕೆಲಸದಲ್ಲಿ ಸೋಲು ಉಂಟಾಗುತ್ತದೆ.
ಗ್ರಹಣದ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದು, ಕೂದಲನ್ನು ಬಾಚಿಕೊಳ್ಳುವುದು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಮಲಗುವುದನ್ನು ಕೂಡ ನಿಷೇಧಿಸಲಾಗಿದೆ.

