ಆಂಧ್ರಪ್ರದೇಶ: ತೀರ್ಥಸ್ಥಾನದಲ್ಲಿ ಒಂದಾಗಿರುವ ವಿಶ್ವದ ಶ್ರೀಮಂತ ದೇವಸ್ಥಾನ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಿದೆ. ಇಲ್ಲಿನ ದೇವರು ಎಷ್ಟು ಪ್ರಸಿದ್ದವೋ ಈ ದೇವಸ್ಥಾನದಲ್ಲಿ ನೀಡುವ ಲಡ್ಡು ಕೂಡ ಅಷ್ಟೇ ಪ್ರಸಿದ್ದ. ತಿರುಪತಿ ಎಂದ ಕೂಡಲೇ ನೆನಪಾಗುವುದೇ ತಿರುಪತಿ ಲಡ್ಡು, ಇದೀಗ ಲಡ್ಡು ಪ್ರಸಾದಕ್ಕೆ ಇಂದಿಗೆ 309 ವರ್ಷಗಳ ಸಂಭ್ರಮ. ಇದನ್ನು ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಪ್ರಾರಂಭಿಸಲಾಯಿತು.

