ಶಾರ್ಜಾ: ಯುಎಇಯಲ್ಲಿ ತುಂಬೆ ಗ್ರೂಪ್ ತನ್ನ 28ನೇ ವರ್ಷದ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸಲು ಶಾರ್ಜಾದ ತುಂಬೆ ಗ್ರೂಪ್ ವಿಲ್ಲಾದಲ್ಲಿ ಕರ್ನಾಟಕ ಸಮುದಾಯದೊಂದಿಗೆ ವಿಶೇಷ ಸಾಂಸ್ಕೃತಿಕ–ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿತು. ಈ ಸಂದರ್ಭ ವ್ಯವಹಾರ ಮತ್ತು ಸಮಾಜಮುಖಿ ಸೇವೆಗೆ ವಿಶಿಷ್ಟ ಕೊಡುಗೆ ನೀಡಿದ ಇಬ್ಬರು ಗಣ್ಯ ವ್ಯಕ್ತಿಗಳಿಗೆ ಜೀವಮಾನದ ಸಾಧನ (ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ) ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಡಾ. ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ಸಂಸ್ಥೆಯ ಬೆಳವಣಿಗೆಯನ್ನು ದೃಶ್ಯಾವಳಿ ಪ್ರದರ್ಶನ ಮೂಲಕ ವಿವರಿಸಲಾಯಿತು. ಡಾ. ತುಂಬೆ ಮೊಯ್ದೀನ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ತುಂಬೆ ಗ್ರೂಪ್ ನಿರ್ಮಿಸಿದ ಜಾಗತಿಕ ಮಾನದಂಡಗಳನ್ನು ಸ್ಮರಿಸಿ, ಯುಎಇ ನಾಯಕತ್ವ ಹಾಗೂ ಕರ್ನಾಟಕ ಸಮುದಾಯದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಗಣ್ಯ ಅಥಿತಿಗಳಾಗಿ ಯು.ಟಿ. ಖಾದರ್, ಅಧ್ಯಕ್ಷರು, ಕರ್ನಾಟಕ ವಿಧಾನಸಭೆ, ಮತ್ತು ಸತೀಶ್ ಕುಮಾರ್ ಶಿವನ್, ಭಾರತದ ಕೌನ್ಸುಲ್ ಜನರಲ್, ದುಬೈ, ಭಾಗವಹಿಸಿದ್ದು ಅವರು ತಮ್ಮ ಸಂದೇಶದಲ್ಲಿ ಗಲ್ಪ್ ಪ್ರದೇಶದಲ್ಲಿ ಭಾರತೀಯ ಸಮುದಾಯದ ನೀಡಿರುವ ಕೊಡುಗೆ ಹಾಗೂ ತುಂಬೆ ಗ್ರೂಪ್ ಗ್ರೂಪ್‌ನ ಜಾಗತಿಕ ಮಟ್ಟದ ಸಾಧನೆಗಳನ್ನು ಪ್ರಶಂಸಿದರು.
ಸಮುದಾಯ ನಾಯಕರಾದ ಡಾ. ಕಾಪು ಮುಹಮ್ಮದ್, ಪ್ರವೀಣ್ ಶೆಟ್ಟಿ, ಮೊಹಮ್ಮದ್ ಅಲಿ ಉಚ್ಚಿಲ್ , ಶಶಿಧರ ನಾಗಾರಾಜಪ್ಪ ಮತ್ತು ಹಿದಾಯತ್ ಅಡ್ಡೂರು ಅವರು ಏಕತೆ, ಸೇವೆ ಮತ್ತು ಸಾಮೂಹಿಕ ಪ್ರಗತಿಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಪ್ರಮುಖ ಅಂಗವಾಗಿ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಅನ್ನು ಮೊಹಮ್ಮದ್ ಮೀರಾನ್, ಚೇರ್ಮನ್ – EMCO International & Electric , ದುಬೈ ಇವರಿಗೆ ಪ್ರದಾನ ಮಾಡಲಾಯಿತು.
ಡಾ. ಬಿ. ಕೆ. ಯೂಸುಫ್, ಅಧ್ಯಕ್ಷರು – Bearys Cultural Forum ಇವರ ದಶಕಗಳ ಸೇವೆ, ನಾಯಕತ್ವ, ಮತ್ತು ಸಮುದಾಯಾಭಿವೃದ್ಧಿಯಲ್ಲಿನ ಮಹತ್ತರ ಕೊಡುಗೆಗಾಗಿ ಸನ್ಮಾನಿಸಲಾಯಿತು. ವಂದನಾ ಸಮರ್ಪಣೆ ಬಳಿಕ ಸ್ನೇಹಸಮ್ಮಿಲನ, ಗುಂಪು ಛಾಯಾಚಿತ್ರಗಳು ಮತ್ತು ಸಹ ಭೋಜನದೊಂದಿಗೆ ಅನನ್ಯ ಕ್ಷಣಗಳ ಕಾರ್ಯಕ್ರಮವಾಗಿ ಸಮಾರೋಪಗೊಂಡಿತು.

