ಧನು ರಾಶಿ: ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗೆ ನೀವೇ ಪೂರ್ಣವಿರಾಮವನ್ನು ಹಾಕಿಕೊಳ್ಳಬಹುದು. ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು.
ಮಕರ ರಾಶಿ: ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ನಿಮ್ಮ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ತೋರಿಸುವರು. ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಮನಸ್ಸಿನಲ್ಲಿ ಒಂದಿಲ್ಲೊಂದು ಭೀತಿಯು ಕಾಡಬಹುದು. ಅತಿಯಾದೆ ಆಸೆಯಿಂದ ನಿಮಗೆ ದುಃಖವು ಬರಬಹುದು. ನಿಮ್ಮ ಆದಾಯವನ್ನು ಯಾರಿಗೂ ಬಿಟ್ಟುಕೊಡಲಾರಿರಿ. ನಿಮ್ಮ ಬಗ್ಗೆ ನೀವು ಅವಲೋಕನ ಮಾಡಿಕೊಳ್ಳುವ ಅಗತ್ಯ ಇರಲಿದೆ.
ಕುಂಭ ರಾಶಿ: ಆಹಾರವನ್ನು ಕೇಳಿದರಿಗೆ ಏನು ಕೊಟ್ಟರೂ ಆಗುತ್ತದೆ ಎಂದು ಏನಾದರೂ ಕೊಟ್ಟುಬಿಡಬೇಡಿ. ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಅಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಂಗಾತಿಯ ಜೊತೆ ವಾದಕ್ಕೆ ಇಳಿಯುವಿರಿ. ಕಛೇರಿಯಲ್ಲಿ ಆದ ಜಗಳವು ಉದ್ಯೋಗವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ಸಂಗಾತಿಯನ್ನು ನೀವು ಹಳೆಯ ಘಟನೆಗಳ ಜೊತೆಗೆ ಟೀಕಿಸಬಹುದು. ನಿಮಗೆ ಪ್ರೀತಿಯ ಕೊರತೆ ಕಾಣಿಸುವುದು.
ಮೀನ ರಾಶಿ; ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಏಕಾಂಗಿಯಾಗಿ ಇರಲು ನೀವು ಬಯಸಬಹುದು. ವಿದ್ಯಾಭ್ಯಾಸದಿಂದ ಸ್ವಲ್ಪ ಬಿಡುಗಡೆಯನ್ನು ಬಯಸುವಿರಿ. ಬಯಸಿದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡಕ್ಕೆ ಹೋಗಲಾಗದು.

