ಸಿಂಹ ರಾಶಿ : ಲಾಭವು ಇಲ್ಲದ ಪ್ರಯಾಣವು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗಬಹುದು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ಇಬ್ಬರೂ ಒಪ್ಪಿಕೊಂಡ ಸಂಗಾತಿಗಳು ದೂರವಾಗುವ ಸಾಧ್ಯತೆಯೂ ಇದೆ. ಜೊತೆಗಾರರು ನಿಮ್ಮ ಕಂಡು ಹಾಸ್ಯ ಮಾಡಬಹುದು.
ಕನ್ಯಾ ರಾಶಿ : ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು. ಯಾರಾದರೂ ನಿಮ್ಮ ಬಳಿ ಅಮೂಲ್ಯವಾದ ವಸ್ತುಗಳನ್ನು ಜೋಪಾನ ಮಾಡಿ ಇಡಲು ಹೇಳಬಹುದು. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ಸರಿಯಾಗಿ ಇರಲಿ.
ತುಲಾ ರಾಶಿ : ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು. ಒಳ್ಳೆಯ ವಸ್ತುವಿನ ಲಾಭವಾಗುವುದು. ಅವ್ಯವಹಾರದಿಂದ ಭಯವಾಗಬಹುದು. ಯಾರನ್ನೂ ನೀವು ಕೆಳಮಟ್ಟದಲ್ಲಿ ಕಾಣಲು ಬೇಡ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ ಜೊತೆ ತರಳುವಿರಿ. ಸ್ಥಾನಚ್ಯುತಿಯ ಭಯವು ನಿಮ್ಮನ್ನು ಕಾಡಬಹುದು.ಮನೆಯ ಸಂದರ್ಭವನ್ನು ನೆನೆದು ದುಃಖಿಸಬಹುದು. ಬಂಧುಗಳು ನಿಮ್ಮನ್ನು ಅಳೆಯಬಹುದು. ಇಂದು ನೀವು ಕೆಲಸದಿಂದ ವಿರಾಮವನ್ನು ಪಡೆಯುವ ಯೋಚನೆ ಬರುವುದು.
ವೃಶ್ಚಿಕ ರಾಶಿ : ವಿದ್ಯಾರ್ಥಿಗಳು ಅಭ್ಯಾಸದ ವಿಷಯದಲ್ಲಿ ಮೈಮರೆಯಬಹುದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ಎಲ್ಲವನ್ನೂ ತಿಳಿದುಕೊಂಡೂ ನೀವು ಮುಂದೆ ಸಾಗಲು ಭಯಪಡುವಿರಿ.

