ಮಾ ದುರ್ಗೆಯ ಒಂಬತ್ತನೇ ರೂಪವಾದ ಮಾ ಸಿದ್ಧಿದಾತ್ರಿಯನ್ನು ನವರಾತ್ರಿಯ ಒಂಬತ್ತನೇ ದಿನದಂದು ಅಂದರೆ ಮಹಾ ನವಮಿಯ ದಿನದಂದು ಪೂಜಿಸಲಾಗುತ್ತದೆ. ದೇವಿಯ ಹೆಸರಿನ ಅರ್ಥ ಎಂದರೆ ಎಲ್ಲಾ ರೀತಿಯ ಸಾಧನೆಗಳನ್ನು ಮತ್ತು ಮೋಕ್ಷವನ್ನು ನೀಡುವ ತಾಯಿ ಎಮದರ್ಥ. ಸಾಮಾನ್ಯವಾಗಿ ಸಿದ್ಧಿದಾತ್ರಿ ದೇವಿಯನ್ನು ದೇವತೆಗಳು, ದೇವತಾ, ಯಕ್ಷ, ಗಂಧರ್ವ, ಕಿನ್ನರ, ರಾಕ್ಷಸ, ಋಷಿ, ಮುನಿ, ಸಾಧಕ ಮತ್ತು ಮನೆಗಳು ಮತ್ತು ಆಶ್ರಮಗಳಲ್ಲಿ ವಾಸಿಸುವ ಜನರು ಸಹ ಪೂಜಿಸುತ್ತಾರೆ. ಈ ದಿನದ ಮಹತ್ವವೇನು? ಮೂಲ ನಕ್ಷತ್ರ ಏಕೆ ವಿಶೇಷ? ಪೂಜೆಯನ್ನ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಾಯಿ ಸಿದ್ಧಿಧಾತ್ರಿ ಕೆಂಪು ಸೀರೆಯುಟ್ಟು ಸಂಪೂರ್ಣವಾಗಿ ಅರಳಿದ ಕಮಲದ ಹೂವಿನ ಮೇಲೆ ಕುಳಿತಿರುತ್ತಾಳೆ. ಅವಳು ಆಯುಧದೊಂದಿಗೆ ನಾಲ್ಕು ತೋಳುಗಳನ್ನು ಹೊಂದಿದ್ದಾಳೆ. ಅವಳ ಮೇಲಿನ ಬಲಗೈಯ ತೋರು ಬೆರಳಿನಲ್ಲಿ, ಚಕ್ರ ಹಿಡಿದಿದ್ದು, ಮೇಲಿನ ಎಡಗೈಯಲ್ಲಿ, ಅವಳು ಶಂಖವನ್ನು ಹಿಡಿದಿದ್ದಾಳೆ. ಅವಳು ತನ್ನ ಕೆಳಗಿನ ಬಲಗೈಯಲ್ಲಿ ಗದೆಯನ್ನು ಹಿಡಿದಿದ್ದು, ಮತ್ತು ಅವಳ ಕೆಳಗಿನ ಎಡಗೈಯಲ್ಲಿ ಕಮಲದ ಹೂವು ಇದೆ.
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದ ಆರನೇ ಮತ್ತು ಹನ್ನೊಂದನೇ ಮನೆಯು ಮಾ ಸಿದ್ಧಿದಾತ್ರಿ ಪೂಜೆಯಿಂದ ಬಲಗೊಳ್ಳುತ್ತದೆ. ಹಿಂದೂ ಪುರಾಣಗಳಲ್ಲಿ, ಭೂಮಿಯ ಮೇಲೆ ಬೆಳಕು ಅಥವಾ ಜೀವವಿಲ್ಲದಿದ್ದಾಗ, ಕತ್ತಲೆಯನ್ನು ಹೋಗಲಾಡಿಸಲು ಈ ಅವತಾರವನ್ನ ತಾಯಿ ತೆಗೆದುಕೊಂಡಳು ಎನ್ನಲಾಗುತ್ತದೆ. ಶತ್ರುಗಳ ನಾಶಕ್ಕೆ ಈ ತಾಯಿಯನ್ನ ಆರಾಧಿಸಬೇಕು ಎನ್ನಲಾಗುತ್ತದೆ.
ದೇವಿಯ ಪೂಜಾ ವಿಧಾನ
ಈ ದಿನ ಬೆಳಗ್ಗೆ ಬೇಕ ಎದ್ದು ಸ್ನಾನ ಮಾಡಿ ದೇವರ ಮನೆಯನ್ನ ಅಲಂಕರಿಸಿ. ಪೂಜೆಯನ್ನು ಪ್ರಾರಂಭಿಸುವ ಮೊದಲು, ದೇವಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಬಂಧಿಸಿದ ಮಂತ್ರಗಳನ್ನು ಪಠಿಸಿ. ಹಣೆಯ ಮೇಲೆ ತಿಲಕವನ್ನು ಹಚ್ಚಿ, ಮತ್ತು ಕಲಶ ಪೂಜೆಯ ನಂತರ ನಿಮ್ಮ ಅಂಗೈಯಿಂದ ನೀರನ್ನು ಕುಡಿಯುವ ಮೂಲಕ ಆಚಮನ ವಿಧಿ ಮಾಡಿ. ನಿಮ್ಮ ಅಂಗೈಯಲ್ಲಿ ನೀರನ್ನು ತೆಗೆದುಕೊಂಡು ದೇವಿಯನ್ನು ಪ್ರಾರ್ಥಿಸುವ ಮೂಲಕ ಸಂಕಲ್ಪವನ್ನು ಮಾಡಿ. ಹಣ್ಣುಗಳು, ಆಹಾರ ಪದಾರ್ಥಗಳು, ಸಿಹಿತಿಂಡಿಗಳು ಮತ್ತು 5 ವಿಧದ ನೈವೇದ್ಯಗಳನ್ನ ಈ ದಿನ ಮಾಡಬೇಕು. ನಂತರ ಆರತಿ ಮಾಡಬೇಕು.
ಪೂಜೆ ಮಾಡುವಾಗ ಪಠಿಸಬೇಕಾದ ಶ್ಲೋಕಗಳಿವು
ಓಂ ಹ್ರೀಂ ಶ್ರೀ ಸಿದ್ಧಿದಾತ್ರೀ ದುರ್ಗಾಯೇ ನಮಃ
1. ಓಂ ದೇವೀ ಸಿದ್ಧಿದತ್ರ್ಯೈ ನಮಃ
ಸಿದ್ಧ ಗಂಧರ್ವ
ಯಕ್ಷದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ

