ಪುರಿ: ಒಡಿಶಾದ ಜಗತ್ ಪ್ರಸಿದ್ಧ ಪುರಿ ಜಗನ್ನಾಥ ದೇಗುಲದಲ್ಲಿರುವ ರತ್ನ ಭಂಡಾರದ ಒಳ ಆವರಣದ ಕಪಾಟುಗಳನ್ನು ಗುರುವಾರ(ಜುಲೈ 18)ದಂದು ತೆರೆಯಲಾಗುವುದು ಎಂದು ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ(ಎಸ್‌ಜೆಟಿಎ) ಮಾಹಿತಿ ನೀಡಿದೆ
ರತ್ನ ಭಂಡಾರದೊಳಗಿರುವ 12ನೇ ಶತ ಮಾನದ ಆಭರಣಗಳನ್ನು ದೇಗುಲದ ಆವರಣ ದೊಳಗೆ ನಿರ್ಮಿಸಲಾಗಿರುವ ತಾತ್ಕಾಲಿಕ ಸಂಗ್ರಹಣ ಕೊಠಡಿಗೆ ಸ್ಥಳಾಂತರಿಲಾಗುವುದು ಎಂದಿದೆ. 46 ವರ್ಷಗಳ ಬಳಿಕ ಜುಲೈ 14ರಂದು ರತ್ನ ಭಂಡಾರವನ್ನು ತೆರೆಯಲಾಗಿತ್ತು. ಎಸ್‌ಜೆಟಿಎ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಜಿಲ್ಲಾಡಳಿತದ ಬಳಿಯಿದ್ದ ನಕಲಿ ಕೀಗಳಿಂದ ಜುಲೈ 14ರಂದು ರತ್ನ ಭಂಡಾರ ತೆರೆಯಲು ಏಕೆ ಸಾಧ್ಯವಾಗಲಿಲ್ಲ ಎನ್ನುವ ಬಗ್ಗೆ ತನಿಖೆ ನಡೆಸುವುದಾಗಿ ಸರಕಾರ ತಿಳಿಸಿದೆ.

