ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಇಪ್ಪತೈದು ವರ್ಷಗಳ ಹಿಂದೆ ತುಂಬೆ ಗ್ರೂಪಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ|| ತುಂಬೆ ಮೊಯಿದೀನ್ ರವರು ಭಾರತದಿಂದ ಬಂದು ಹೊರದೇಶದ ಯು.ಎ.ಇ. ಯ ಅಜ್ಮಾನ್ ನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮೆಡಿಕಲ್ ಯೂನಿವರ್ಸಿಟಿ ಕಾಲೇಜ್ ಹಾಸ್ಪಿಟಲ್ ಸ್ಥಾಪಿಸಿರುವ ಏಕೈಕ ಭಾರತೀಯರು, ಕನ್ನಡಿಗರಾಗಿರುವ ಇವರ ಅಪೂರ್ವ ಸಾಧನೆಗಳನ್ನು ಗೌರವಿಸಿ, 2024 ನವೆಂಬರ್ 1ನೇ ತಾರೀಕಿನಂದು 69ನೆ ಕರ್ನಾಟಕ ರಾಜ್ಯೋತ್ಸವ 50ನೇ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕ ಸರ್ಕಾರ 2024ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ಸಮ್ಮುಖದಲ್ಲಿ ವಿಧಾನ ಸೌಧದ ಮುಂಭಾಗದ ಭವ್ಯ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಗಿತ್ತು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೊನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಯು.ಎ.ಇ. ಯ ಅಜ್ಮಾನ್ ನಲ್ಲಿರುವ ತುಂಬೆ ಯವರ ಭವ್ಯ ಬಂಗಲೆಯಲ್ಲಿ ಭೇಟಿಮಾಡಿ ಅಭಿನಂದನೆ ಸಲ್ಲಿಸುವ ಹೃದಯಸ್ಪರ್ಶಿ ಸಮಾರಂಭ ಡಿಸೆಂಬರ್ 5ನೆ ತಾರೀಕು ರಾತ್ರಿ 7.30 ಗಂಟೆಗೆ ಅತ್ಯಂತ ಅದ್ಧೂರಿಯಾಗಿ ನಡೆಯಿತು.

ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಡಾ|| ತುಂಬೆ ಮೊಯಿದೀನ್ ಮತ್ತು ಮನೆಯವರು ಹಾಗೂ ತುಂಬೆ ಗ್ರೂಪಿನ ಶ್ರೀಯುತ ಮೊಯಿದೀನ್ ಫರಾದ್ ಮತ್ತು ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಬರಮಾಡಿ ಕೊಂಡರು. ತುಂಬೆ ಮೀಡಿಯಾದ ಮುಖ್ಯಸ್ಥರಾದ ಶ್ರೀ ವಿಘ್ನೇಶ್ ಉನದ್ಕಟ್ ರವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ತುಂಬೆ ಮೊಯಿದೀನ್ ರವರನ್ನು ವೇದಿಕೆಗೆ ಬರಮಾಡಿಕೊಂಡು ಅವರ ಸಾಧನೆಯ ಹೆಜ್ಜೆಗುರುತುಗಳನ್ನು ಶ್ಲಾಘಿಸಿ, ಅಭಿನಂದನೆಗಳನ್ನು ಸಲ್ಲಿಸುತ್ತಾ ಸನ್ಮಾನಿಸಿ ಗೌರವ ಸಲ್ಲಿಸಿದರು.

ಅಭಿನಂದನಾ ಸಮಾರಂಭದಲ್ಲಿ ಡಾ| ಬಿ. ಕೆ. ಯೂಸುಫ್ ಅಧ್ಯಕ್ಷರು ಬ್ಯಾರೀಸ್ ಕಲಚರಲ್ ಫೋರಂ ದುಬಾಯಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ್ ಶೆಟ್ಟಿ, ಅನಿನಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷರು ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಕರ್ನಾಟಕ ಸಂಘ ದುಬಾಯಿ ಅಧ್ಯಕ್ಷರು ಶ್ರೀ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಶ್ರೀ ಸತೀಶ್ ಪೂಜಾರಿ, ಪೂರ್ವ ಅಧ್ಯಕ್ಷರು ಶ್ರೀ ಬಿ. ಕೆ. ಗಣೇಶ್ ರೈ, ಕನ್ನಡಿಗರ ಕೂಟ ದುಬಾಯಿ ಅಧ್ಯಕ್ಷರು ಶ್ರೀ ಅರುಣ್,

ಕೆ.ಎಂ.ಸಿ.ಸಿ. ಅಜ್ಮಾನ್, ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷರು, ಶ್ರೀ ಎಂ ಇ. ಮೂಳೂರ್, ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್, ಯು.ಎ.ಇ. ಚಾಪ್ಟರ್, ಅಬುಧಾಬಿ ಬ್ಯಾರೀಸ್ ವೆಲ್ಫೇರ್ ಫೋರಂ ನ ಅಧ್ಯಕ್ಷರು ಶ್ರೀ ಮಹಮದ್ ಆಲಿ ಉಚ್ಚಿಲ್, ಶ್ರೀ ಅಬ್ಬು ಬಕ್ಕರ್ ಸಿದ್ದಿಕ್ ಮಂಗಳೂರು, ಭಟ್ಕಳ್ ಮುಸ್ಲಿಮ್ ಜಮಾತ್ ದುಬಾಯಿ, ಮೊಯಿನತ್ ಉಲ್ ಮುಸ್ಲಿಮ್ ಎಜುಕೇಶನ್ ಸೆಂಟರ್, ಗಲ್ಫ್ ಗೆಳೆಯ ಗೆಳತಿಯರು, ಮಂಗ್ಳುರ್ ಕೊಂಕಣ್ಸ್ ದುಬಾಯಿ, ಬ್ರಾಹ್ಮಣ ಸಮಾಜ ದುಬಾಯಿ, ಸಂದ್ಯಾ ಕ್ರಿಯೇಶನ್ಸ್, ಕರ್ನಾಟಕ ಪತ್ರಕರ್ತರ ಒಕ್ಕೂಟ ಹಾಗೂ ಇನ್ನಿತರ ಗಣ್ಯಾತಿ ಗಣ್ಯರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎಲ್ಲಾ ಅಹ್ವಾನಿತ ಅತಿಥಿಗಳಿಗೆ ಡಾ| ತುಂಬೆ ಮೊಯಿದೀನ್ ಮತ್ತು ಮನೆಯವರು. ಭಕ್ಷ್ಯ ಭೋಜನಗಳದ ವ್ಯವಸ್ಥೆಯನ್ನು ಮಾಡಿ ಸತ್ಕರಿಸಿದರು. ಡಾ| ತುಂಬೆ ಮೊಯಿದೀನ್ ಮೀಟ್ ಅಂಡ್ ಗ್ರೀಟ್ ಸಮಾರಂಭ ಅತ್ಮೀಯರ ಪ್ರೀತಿ ಗೌರವ ಅಭಿಮಾನಕ್ಕೆ ಸುಂದರ ಸಂಜೆಯೊಂದು ಅಜ್ಮಾನ್ ನಲ್ಲಿ ಸಾಕ್ಷಿಯಾಯಿತು.