ನವದೆಹಲಿ: ಭಾರತ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಿದ್ಧಗೊಳ್ಳುತ್ತಿದ್ದು, ಇದೇ ವೇಳೆ ಭಾರತ ತನ್ನ ರಕ್ಷಣಾ ವಲಯದಲ್ಲಿ ಅತ್ಯುತ್ತಮ ಸಾಧನೆಯೊಂದನ್ನು ಮಾಡಿದೆ. ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರೀಸ್ ಸ್ವದೇಶಿ ನಿರ್ಮಿತ ಕಮಿಕಾಜೆ ಡ್ರೋನ್ಗಳನ್ನು ನಿರ್ಮಿಸಿದೆ.
ಇದು ಅತ್ಯಂತ ಅಪಾಯಕಾರಿ ಡ್ರೋನ್ ಆಗಿದ್ದು ಎದುರಾಳಿಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ಸ್ಫೋಟಗೊಳ್ಳುವ ಆತ್ಮಾಹುತಿ ಬಾಂಬರ್ ಆಗಿದೆ. ಇಂಥ ಡ್ರೋನ್ಗಳು ಇನ್ನು ಭಾರತದ ಸೇನೆಯನ್ನೂ ಸೇರಲಿದೆ. ಹೆಚ್ಚು ಶಕ್ತಿಯುತವಾದ ಈ ಯುದ್ದ ಉಪಕರಣದ ಸೇರ್ಪಡೆಯುವ ಭಾರತದ ಶಕ್ತಿಯನ್ನು ಹೆಚ್ಚಿಸಲಿದೆ.
ಸ್ವದೇಶಿ ಕಮಿಕಾಜೆ ಡ್ರೋನ್ ಸಂಶೋಧನೆಯ ನೇತೃತ್ವ ವಹಿಸಿರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ನ ನಿರ್ದೇಶಕ ಡಾ.ಅಭಯ್ ಪಾಶಿಲ್ಕರ್ ಮಾಹಿತಿ ನೀಡಿ “ಭಾರತವು ಈ ಸಂಪೂರ್ಣ ದೇಶೀಯ ಕಮಿಕಾಜೆ ಡ್ರೋನ್ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು 21 ನೇ ಶತಮಾನದ ಹೊಸ ಯುಗದ ಯುದ್ಧ ತಂತ್ರಕ್ಕೆ ಅಗತ್ಯವಾಗಿದೆ ” ಎಂದು ಹೇಳುತ್ತಾರೆ.
ಭಾರತೀಯ ಕಮಿಕಾಜೆ ಡ್ರೋನ್ ಸುಮಾರು 2.8 ಮೀಟರ್ ಉದ್ದವಿರುತ್ತದೆ. 3.5 ಮೀಟರ್ ಅಗಲದ ರೆಕ್ಕೆಗಳನ್ನು ಹೊಂದಿದೆ. ಒಟ್ಟಾರೆ ಸುಮಾರು 120 ಕೆಜಿ ತೂಕ ಹೊಂದಿರುವ ಈ ಡ್ರೋನ್ 25 ಕೆ.ಜಿ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದೆ.
ಸಂಶೋಧನಾ ತಂಡದ ಡಾ.ಪಾಶಿಲ್ಕರ್ ಮಾತನಾಡಿ, ಭಾರತದ ಈ ಅಲೆಮಾರಿ ಶಸ್ತ್ರಾಸ್ತ್ರಗಳು ಸುಮಾರು ಒಂಬತ್ತು ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿರುತ್ತವೆ, ಅಂದರೆ ಒಮ್ಮೆ ಉಡಾವಣೆಯಾದ ನಂತರ ಅದು ಅಗತ್ಯವಾಗಿರು ಕ್ಷೇತ್ರದಲ್ಲಿ ನಿರಂತರವಾಗಿ ಹಾರಬಹುದು. ಗುರಿಯನ್ನು ಗುರುತಿಸಿದ ನಂತರ ನಿಯಂತ್ರಕ ಅನುಮತಿಯ ನಂತರ ‘ಡು ಆರ್ ಡೈ ಡ್ರೋನ್ ಅನ್ನು ತನ್ನ ಆತ್ಮಹತ್ಯೆ ಕಾರ್ಯಾಚರಣೆ ಆರಂಭಿಸುತ್ತದೆ.
ಭಾರತೀಯ ಕಮಿಕಾಜೆ ಡ್ರೋನ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 30-ಅಶ್ವಶಕ್ತಿಯ ವಾಂಕೆಲ್ ಎಂಜಿನ್ ಅನ್ನು ಬಳಸುತ್ತದೆ. ಇದು ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಾಗುತ್ತದೆ. 1,000 ಕಿಲೋಮೀಟರ್ ನಿರಂತರವಾಗಿ ಹಾರುವ ಸಾಮರ್ಥ್ಯ ಹೊಂದಿದೆ. “ಇತರ ದೇಶಗಳು ನಿಯೋಜಿಸಿದ ಇಂತಹ ಡ್ರೋನ್ಗಳು ಬೇರೆಡೆ ನಡೆಯುತ್ತಿರುವ ಆಧುನಿಕ ಯುದ್ಧಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶಿಸಿವೆ ” ಎಂದು ಡಾ.ಪಾಶಿಲ್ಕರ್ ಹೇಳಿದ್ದಾರೆ.

