ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ.11ರಂದು ಚಂಡಿಕಾಯಾಗ ಹಾಗೂ ರಾತ್ರಿ ನವರಾತ್ರಿ ರಥೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ಜರಗಿತು.
ದೇಗುಲದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ ಹಾಗೂ ಕೆ.ಎನ್.ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರಗಿದವು. ಲೋಕಕಲ್ಯಾಣಾರ್ಥವಾಗಿ ಜರಗಿದ ಚಂಡಿಕಾಯಾಗದಲ್ಲಿ ವಿವಿಧ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದು, ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ನಡೆದ ಪ್ರದಕ್ಷಿಣೆಯ ರಥಯಾತ್ರೆಯಲ್ಲಿ ಭಕ್ತಿಭಾವದಿಂದ ಸಂಭ್ರಮಿಸಿದರು. ರಥೋತ್ಸವದ ಕೊನೆಯಲ್ಲಿ ನಡೆಯುವ ನಾಣ್ಯ ಸ್ವೀಕರಿಸಲು ಭಕ್ತರು ಮುಗಿಬಿದ್ದರು.ವಿದ್ಯಾರಂಭಕ್ಕೆ ಚಾಲನೆ
ಸರಸ್ವತಿ ಕಲ್ಯಾಣ ಮಂಟಪ ಹಾಗೂ ದೇಗುಲದ ಹೊರಪೌಳಿಯಲ್ಲಿ ಅ.12ರಂದು ಪುಟ್ಟ ಮಕ್ಕಳಿಗೆ ನೆರವೇರಿದ ವಿದ್ಯಾರಂಭಕ್ಕೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಮಕ್ಕಳ ನಾಲಿಗೆ ಮೇಲೆ ಚಿನ್ನದ ನಾಣ್ಯದಲ್ಲಿ ಓಂಕಾರ ಬರೆಸುವುದಲ್ಲದೆ, ಅಕ್ಕಿಯಲ್ಲಿ ಓಂ ಬರೆಸಲಾಯಿತು. ವಿಜಯದಶಮಿ ಸಲುವಾಗಿ ವಿದ್ಯಾರಂಭದ ಬಳಿಕ ನವಾನ್ನಪ್ರಾಶನ ಹಾಗೂ ವಿಜಯೋತ್ಸವ ನೆರವೇರಿತು.