ದುಬೈ: ಕರ್ನಾಟಕ ಸಂಘ ದುಬೈ ಆಯೋಜನೆಯ ಶೀರ್ಷಿಕೆ ಪ್ರಾಯೋಜಕರು ಯುಮಿ ವೆಂಚರ್ಸ್ ಮತ್ತು ಸಹ ಪ್ರಾಯೋಜಕರು ಪರ್ವ ಗ್ರೂಪ್ ಪ್ರಸ್ತುತಪಡಿಸುವ ಕರ್ನಾಟಕ ರಾಜ್ಯೋತ್ಸವ – 2025 ದುಬೈ ಆಚರಣೆ ಮತ್ತು ಗ್ಲೋಬಲ್ ಬಿಸಿನೆಸ್ ಫೋರಮ್ ದುಬೈ ಉದ್ಘಾಟನೆ ಕಾರ್ಯಕ್ರಮವು 09 ನವೆಂಬರ್ 2025 (ಭಾನುವಾರ) ಬೆಳಿಗ್ಗೆ 11:00 ರಿಂದ ಸಂಜೆ 7:00 ರವರೆಗೆ ನ್ಯೂ ಡಾನ್ ಪ್ರೈವೇಟ್ ಸ್ಕೂಲ್, ಮೂಹೇಶ್ನ ದುಬೈ ನಲ್ಲಿ ನಡೆಯಲಿದೆ.
ಪ್ರವೇಶ ನೋಂದಣಿಯಿಂದ ಮಾತ್ರ ಉಚಿತವಾಗಿದ್ದು, ಉಚಿತ ಊಟದ ವುವಸ್ಥೆಯು ಮಧ್ಯಾಹ್ನ 1 ರಿಂದ 2 ರವರೆಗೆ ಇರಲಿದೆ. ಸ್ಯಾಂಡಲ್‌ವುಡ್ ಚಿತ್ರರಂಗದ ತಾರೆಯರು, ರಾಜಕೀಯ ನಾಯಕರು, ಉದ್ಯಮಿಗಳು, ಸಾಹಿತ್ಯ ದಿಗ್ಗಜರು ಮತ್ತು ಸಾಂಸ್ಕೃತಿಕ ಕಲಾವಿದರ ಸಮ್ಮುಖದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ ನಡೆಯಲಿದೆ.
ಉಚಿತ ಪ್ರವೇಶಕ್ಕೆ ಇಲ್ಲಿ ನೋಂದಾಯಿಸಿಕೊಳ್ಳಬೇಕು

